- Advertisement -
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆ ಮಾತ್ರವಲ್ಲದೇ ತಮ್ಮ ಅದ್ಭುತ ಡ್ಯಾನ್ಸ್ ನಿಂದ ಅಪಾರ ಕನ್ನಡಿಗರ ಮನ ಗೆದ್ದಿದ್ದಾರೆ. ತೆರೆಮೇಲೆ ಮಾತ್ರವಲ್ಲದೇ ತೆರೆಹಿಂದೆಯೂ ಅಪ್ಪು ಬಿಂದಾಸ್ ಹಾಕಿ ಸ್ಟೆಪ್ಸ್ ಹಾಕುವ ವಿಡಿಯೋಗಳು ಆಗಾಗಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾವೆ. ಅತಂಹದ್ದೇ ಒಂದು ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ರಿಂಗಣಿಸ್ತಿದ್ದು, ಪುನೀತ್ ಪವರ್ ಫುಲ್ ಕುಣಿತ ನೋಡಿ ಫ್ಯಾನ್ಸ್ ಊಘೇ ಊಘೇ ಅಂತಿದ್ದಾರೆ.
ಹೀಗೆ ಪುನೀತ್ ರಾಜ್ ಕುಮಾರ್ ಭರ್ಜರಿ ಸ್ಟೆಪ್ ಹಾಕಿರೋದು ಮದುವೆ ಕಾರ್ಯಕ್ರಮವೊಂದರಲ್ಲಿ. ಮುಂಗಾರು ಮಳೆಯ ಸುವ್ವಿ ಸುವ್ವಾಲಿ ಹಾಡಿಗೆ ಹೆಜ್ಜೆ ಹಾಕಿರೋ ಅಪ್ಪು, ಪಂಜಾಬ್ ಶೈಲಿಯಲ್ಲಿ ಪೇಟೆ ಧರಿಸಿ, ಪಂಜಾಬಿ ಬಾಂಗಡ ಡೋಲು ವಾದ್ಯಕ್ಕೆ ಕುಣಿದು ಕುಪ್ಪಳಿಸಿದ್ದಾರೆ. ಸದ್ಯ ಈ ವಿಡಿಯಫ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದ್ದು, ಅಭಿಮಾನಿಗಳು ಪುನೀತ್ ಕುಣಿತ ನೋಡಿ ಥ್ರಿಲ್ ಆಗಿದ್ದಾರೆ.
- Advertisement -