- Advertisement -
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ ಯುವರತ್ನ ಸಿನಿಮಾ ರಿಲೀಸ್ ಗೂ ಮೊದ್ಲೇ ಸಖತ್ ಹವಾ ಎಬ್ಬಿಸ್ತಿದೆ. ಈಗಾಗ್ಲೇ ಟೀಸರ್ ಹಾಗೂ ಪವರ್ ಆಫ್ ಯೂತ್ಸ್ ಸಾಂಗ್ ಮೂಲಕ ಕ್ರೇಜ್ ಸೃಷ್ಟಿಸಿರುವ ಯುವರತ್ನದ ಮತ್ತೊಂದು ಟ್ರ್ಯಾಕ್ ಬೊಂಬಾಟ್ ಆಗಿ ಮೂಡಿ ಬಂದಿದೆ.
‘ಊರಿಗೊಬ್ಬ ರಾಜ’ ಎನ್ನುವ ಹಾಡಿನಲ್ಲಿ ಪವರ್ ಸ್ಟಾರ್ ಪವರ್ ಫುಲ್ ಹಾಗೂ ಕ್ರೇಜಿ ಸ್ಟೆಪ್ಸ್ ಹಾಕಿದ್ದಾರೆ. ಅಪ್ಪು ಜೊತೆ ಸಯೇಶ್ ಡ್ಯಾನ್ಸ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ತಮನ್ನಾ ಮ್ಯೂಸಿಕ್, ಸಂತೋಷ್ ಆನಂದ್ ರಾಮ್ ಲಿರಿಕ್ಸ್, ಅಪ್ಪು ಡ್ಯಾನ್ಸ್ ಟೋಟಾಲ್ ಆಗಿ ಊರಿಗೊಬ್ಬ ರಾಜಕುಮಾರ್ ಟ್ರ್ಯಾಕ್ ಸೂಪರ್ ಆಗಿ ಮೂಡಿ ಬಂದಿದೆ.
ಇನ್ನು, ಪುನೀತ್ ಹಾಗೂ ರಮ್ಯಾ ಬೆಹರಾ ಈ ಹಾಡು ಹಾಡಿದ್ದು, ಸಖತ್ ಕ್ರೇಜಿಯಾಗಿ ಸಾಂಗ್ ಮೂಡಿ ಬಂದಿದೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ರಿಲೀಸ್ ಆಗಿರುವ ಈ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ತಿದೆ.
- Advertisement -

