Thursday, December 5, 2024

Latest Posts

ಕ್ರಿಸ್ಮಸ್ ಗೆ ಅಪ್ಪು ‘ಯುವರತ್ನ’ ಸಿನಿಮಾದಿಂದ ರೋಮ್ಯಾಂಟಿಕ್ ಸಾಂಗ್ ರಿಲೀಸ್

- Advertisement -

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ ಯುವರತ್ನ ಸಿನಿಮಾದ ಪವರ್ ಆಫ್ ಯೂತ್ ಸಾಂಗ್ ಗೆ ಸಖತ್ ರೆಸ್ಪಾನ್ಸ್ ಸಿಕ್ತಿದೆ. ಯೂತ್ಸ್ ಅಂತೂ ಆ ಹಾಡಿಗೆ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಈ ಕ್ರೇಜ್ ನಡುವೆಯೇ ಯುವರತ್ನ ಸಿನಿಮಾದ ಎರಡನೇ ಟ್ರ್ಯಾಕ್ ರಿಲೀಸ್ ಆಗ್ತಿದೆ.

ನೀನಾದೆ ನಾ ಎಂಬ ರೋಮ್ಯಾಂಟಿಕ್ ಸಾಂಗ್ ಇದೇ ಕ್ರಿಸ್ಮಸ್ ಹಬ್ಬಕ್ಕೆ ರಿಲೀಸ್ ಆಗ್ತಿದೆ. ಈ ಹಾಡಲ್ಲಿ ಅಪ್ಪು ಜೊತೆ ಟಿಟೌನ್ ಬ್ಯೂಟಿ ಸಯೇಶಾ ಸೆಹಗಲ್ ಹೆಜ್ಜೆ ಹಾಕಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲೂ ರಿಲೀಸ್ ಆಗ್ತಿರುವ ಈ ಹಾಡಿಗೆ ಎಸ್.ಎಸ್.ತಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಈಗಾಗ್ಲೇ ಪವರ್ ಆಫ್ ಯೂತ್ಸ್ ಸಾಂಗ್ ಗೆ ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಸಖತ್ ರೆಸ್ಪಾನ್ಸ್ ಸಿಕ್ತಿದ್ದು, ಈ ಹಾಡೂ ಅಭಿಮಾನಿಗಳ ಹೃದಯ ಗೆಲ್ಲುವ ನಿರೀಕ್ಷೆಯಲ್ಲಿದೆ ಚಿತ್ರತಂಡ.

- Advertisement -

Latest Posts

Don't Miss