Hubli News: ಹುಬ್ಬಳ್ಳಿ: ಸಿಎಂ, ಡಿಸಿಎಂ ಬದಲಾವಣೆ ವಿಚಾರದಲ್ಲಿ ಸ್ವಾಮೀಜಿಗಳ ಪಾತ್ರಕ್ಕಿಂತ ಕಾಂಗ್ರೆಸ್ಸಿನ ಶಾಸಕರು ಹಾಗೂ ನಾಯಕರ ಪಾತ್ರವೇ ಹೆಚ್ಚಾಗಿದೆ. ಸ್ವಾಮೀಜಿಗಳು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರು ಹೇಳಿದಂತೆ ನಡೆದುಕೊಳ್ಳುತ್ತಿರುವುದು ಕಾಂಗ್ರೆಸ್ ಶಾಸಕರು ಎಂದು ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.
ಸಿಎಂ, ಡಿಸಿಎಂ ಬದಲಾವಣೆ ವಿಚಾರದಲ್ಲಿ ಸ್ವಾಮೀಜಿಗಳ ಹೇಳಿಕೆ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಈಗ ಸಾರ್ವಜನಿಕರಿಗೆ ಮಾತ್ರವಲ್ಲದೆ ಅಧಿಕಾರಿಗಳಲ್ಲಿಯೂ ಗೊಂದಲ ಸೃಷ್ಟಿಯಾಗಿದೆ. ಇವರ ಸರ್ಕಾರ ಐದು ವರ್ಷ ನಡೆಯುತ್ತದೆಯೋ ಇಲ್ಲವೋ..? ಇವರು ಐದು ವರ್ಷ ಸಿಎಂ, ಡಿಸಿಎಂ ಆಗಿರ್ತಾರೋ ಇಲ್ಲೋ ಎಂಬುವಂತ ಅನುಮಾನ ಸೃಷ್ಟಿಯಾಗಿದೆ ಎಂದರು.
ಸಚಿವ ಸಂತೋಷ ಲಾಡ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಂತೋಷ ಲಾಡ್ ಅವರು ಏನು ಮಾಡಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ಸಿನ ಬಹುತೇಕ ಶಾಸಕರು ನಮ್ಮ ಜೊತೆಗೆ ಮಾತನಾಡಿ ಕೇಂದ್ರದಿಂದ ಯಾವುದಾದರೂ ಅನುದಾನ ಇದ್ದರೇ ಕೊಡಿ ಎಂದು ಕೇಳುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಆಡಳಿತ ವೈಖರಿ ಗೊತ್ತಾಗುತ್ತದೆ ಎಂದು ಅವರು ವ್ಯಂಗ್ಯವಾಡಿದರು.
ಬಾಹ್ಯಾಕಾಶದಲ್ಲಿ ಸಿಲುಕಿದ ಸುನೀತಾ ವಿಲಿಯನ್ಸ್; ಬಾಹ್ಯಾಕಾಶದಲ್ಲಿ ಏನಾಗ್ತಿದೆ ಗೊತ್ತಾ?