Sunday, May 26, 2024

Latest Posts

ಯಾರು ಏನೇ ತಿಪ್ಪರಲ್ಲಾಗ ಹೊಡೆದರೂ ಪ್ರಹ್ಲಾದ್ ಜೋಶಿ‌ ಗೆಲ್ಲುತ್ತಾರೆ ಮೋದಿ ಪ್ರಧಾನಿಯಾಗುತ್ತಾರೆ: ಅರವಿಂದ್ ಬೆಲ್ಲದ್..

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ್ ಬೆಲ್ಲದ್ ಮಾತನಾಡಿದ್ದು, ವಿನಯ ಕುಲಕರ್ಣಿಯಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಹಿಟ್ಲರ್ ಹೋಲಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ವಿನಯ್ ಕುಲಕರ್ಣಿ ಅವರು ಸಿಟ್ಟಿನಲ್ಲಿ ಈ ರೀತಿ ಟೀಕೆ ಮಾಡುತ್ತಿದ್ದಾರೆ. ಎಲ್ಲರಿಗೂ ಅತ್ಯಂತ ಪ್ರೀತಿಯಿಂದ ಸಿಗುವ ನಾಯಕ ಪ್ರಹ್ಲಾದ್ ಜೋಶಿ. ನಮಗೆಲ್ಲರಿಗೂ ಮಾದರಿಯಾದಂತಹ ಕಾರ್ಯಕರ್ತ ಪ್ರಹ್ಲಾದ್ ಜೋಶಿ ಅವರು. ಹೀಗಾಗಿ ಹಿಟ್ಲರ್ ಜೊತೆ ಅವರಿಗೆ ಹೋಲಿಕೆ ಸರಿಯಾದುದ್ದಲ್ಲ.ನಮ್ಮ ಪಕ್ಷದ ಕಾರ್ಯಕರ್ತರು ಎಲ್ಲ ಸಂಘ ಸಂಸ್ಥೆಗಳಲ್ಲಿ ಬೆಳೆದಿದ್ದಾರೆ.ಹಿಂದಿ ಪ್ರಚಾರ ಸಭೆಯಲ್ಲಿ ನಮ್ಮ ಅಜ್ಜ‌ ಸೇರಿದಂತೆ ಹಲವು ಮುಖಂಡರು ಕೆಲಸ‌  ಮಾಡಿದ್ದಾರೆ. ಹೊಸ ನೀರು ಬರುತ್ತೆ ಹಳೇ ನೀರು ಹೋಗುತ್ತೆ ಎಂದು  ಅರವಿಂದ್ ಬೆಲ್ಲದ್ ಹೇಳಿದ್ದಾರೆ.

ದಿಂಗಾಲೇಶ್ವರ ಸ್ವಾಮೀಜಿಗಳಿಗೆ ಕಾಂಗ್ರೆಸ್ ಬಾಹ್ಯ ಬೆಂಬಲ ವಿಚಾರದ ಬಗ್ಗೆ ಮಾತನಾಡಿದ ಬೆಲ್ಲದ್,  ಅವರಿಗೆ ಬಾಹ್ಯ ಬೆಂಬಲವಾದರೂ ಕೊಡಲಿ ಅಥವಾ ಕಾಂಗ್ರೆಸ್ ಪಕ್ಷದಿಂದಾದರೂ ಕಣಕ್ಕಿಳಿಸಲಿ,
ಅದು ಅವರಿಗೆ ಬಿಟ್ಟದ್ದು. ಮೋದಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ನಾವು ಜನರ ಬಳಿ ಹೋಗುತ್ತೇವೆ. ಯಾರು ಏನೇ ತಿಪ್ಪರಲ್ಲಾಗ ಹೊಡೆದರೂ ಪ್ರಹ್ಲಾದ್ ಜೋಶಿ‌ ಗೆಲ್ಲುತ್ತಾರೆ ಮೋದಿ ಪ್ರಧಾನಿಯಾಗುತ್ತಾರೆ. ಜೋಶಿಯವರಿಂದ ಲಿಂಗಾಯತ ನಾಯಕರಿಗೆ ಅನ್ಯಾಯ ಆರೋಪ ವಿಚಾರದ ಬಗ್ಗೆ ಬೆಲ್ಲದ್ ಪ್ರತಿಕ್ರಿಯಿಸಿದ್ದು,  ಜೋಶಿಯವರು ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಹೇಳಿದ್ದಾರೆ.

ಒಳ್ಳೆ ಮಾರ್ಕ್ಸ್ ಕೊಡದಿದ್ದಲ್ಲಿ, ಶಿಕ್ಷಕರ ಮೇಲೆ ವಾಮಾಚಾರ ಮಾಡಿಸುವುದಾಗಿ ಬೆದರಿಕೆ

ಬಾಲರಾಮನಿಗೆ 7 ಕೆಜಿ ತೂಕದ ಚಿನ್ನದ ರಾಮಾಯಣ ಪುಸ್ತಕ ಅರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ

ನಾನು 9 ತಿಂಗಳು ಜೈಲಿನಲ್ಲಿದ್ದಾಗ, ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ: ಜೋಶಿ ವಿರುದ್ಧ ವಿನಯ್ ಆರೋಪ

- Advertisement -

Latest Posts

Don't Miss