ಮಿಯಾಮಿ: ಭಾರತದ ಯುವ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಅತ್ಯದ್ಭುತ ಪ್ರದರ್ಶನ ನೀಡಿ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‍ಸನ್ ಅವರನ್ನು ಮಣಿಸಿ ಅಚ್ಚರಿ ನೀಡಿದರು. ಆದರೆ ಅಗ್ರ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.
ಇಲ್ಲಿ ಮುಕ್ತಾಯವಾದ ಚೆಸ್ ಟೂರ್ನಿಯಲ್ಲಿ ಪ್ರಜ್ಞಾನಂದ ಫೈನಲ್‍ನಲ್ಲಿ ನೇರ ಮೂರು ಗೇಮ್‍ಗಳನ್ನು ಗೆದ್ದರು. ನಂತರ ಟೈಬ್ರೇಕ್‍ನಲ್ಲಿ ಎರಡನ್ನು ಗೆದ್ದು 4-2 ಅಂಕಗಳಿಂದ ಗೆದ್ದರು.
ಕಾರ್ಲ್‍ಸನ್ ವಿರುದ್ಧ ಗೆದ್ದ ಹೊರತಾಗಿಯೂ 17 ವರ್ಷದ ಪ್ರಜ್ಞಾನಂದ ಟೂರ್ನಿಯಲ್ಲಿ ಎರಡನೆ ಸ್ಥಾನ ಪಡೆದರು. ಹೆಚ್ಚು ಅಂಕಗಳಿಸಿದ್ದರಿಂದ ನಾರ್ವೆ ಕಾರ್ಲ್‍ಸನ್ ಚಾಂಪಿಯನ್ ಆದರು.
ಏಳು ಸುತ್ತುಗಳಲ್ಲಿ ಕಾರ್ಲ್‍ಸನ್ 16 ಅಂಕ ಪಡೆದರೆ ಪ್ರಜ್ಞಾನಂದ 15 ಅಂಕ ಪಡೆದರು.
ಪ್ರಜ್ಞಾನಂದ ಮತ್ತು ಕಾರ್ಲ್‍ಸನ್ ನಡುವಿನ ಪಂದ್ಯ ಜಿದ್ದಾಜಿದ್ದನಿಂದ ಕೂಡಿತ್ತು. ನಾಲ್ಕು ಸುತ್ತುಗಳ ಕದನದಲ್ಲಿ ಮೊದಲೆರಡು ಸುತ್ತುಗಳನ್ನು ಇಬ್ಬರೂ ಡ್ರಾ ಮಾಡಿಕೊಂಡರು.
ಮೂರನೆ ಸುತ್ತಿನಲ್ಲಿ ಗೆದ್ದ ಕಾರ್ಲ್‍ಸನ್ 2-1ಮುನ್ನಡೆ ಪಡೆದರು. ನಾಲ್ಕನೆ ಸುತ್ತಿನಲ್ಲಿ ಪ್ರಜ್ಞಾನಂದ ಗೆದ್ದು ಪಂದ್ಯವನ್ನು ಜೀವಂತವಾಗಿರಿಸಿಕೊಂಡರು. ಕೈಬ್ರೇಕ್ ಮೊರೆ ಹೋದಾಗ ಪ್ರಜ್ಞಾನಂದ ಗೆದ್ದು ಸಂಭ್ರಮಿಸಿದರು.
ಫ್ರಾನ್ಸ್‍ನ ಅಲಿರೆಜಾ ಫಿರೋಜಾ 15 ಅಂಕ ಪಡೆದರು. ಆದರೆ ಪ್ರಜ್ಞಾನಂದ ವಿರುದ್ಧ ಸೋತಿದ್ದರಿಂದ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.