ಬೇಲೂರು :ಅನುಗಟ್ಟ ಪಂಚಾಂಯತಿ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಅದನ್ನು ಭಗೆಹರಿಸುವುದೇ ನಮ್ಮ ಕೆಲಸವೆಂದು ಲೋಕ ಸಭಾ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರುಮಲೆನಾಡು ಭಾಗವಾದ ಅರೇಹಳ್ಳಿ ಜಿಲ್ಲಾ ಪಂಚಾಯತಿಗೆ ಸೇರಿದ ಅನುಗಟ್ಟ ಗ್ರಾಮಪಂಚಾತಿಯಲ್ಲಿ ಅನೇಕ ಸಮಸ್ಯೆಗಳು ಎದ್ದು ಕಾಣುತ್ತಿದೆ ಅದರಲ್ಲಿ ಕಂದಾಯ ಇಲಾಖೆಗೆ ಸಂಬಂದಿಸಿದ ರಿವಿನ್ನು ಇಲಾಖೆಯಲ್ಲಿ ಅತೀ ಹೆಚ್ಚು ಸಮಸ್ಯೆ ಇದ್ದು ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಾಹಿಸದೆ ಇದ್ದರೆ ಸಾರ್ವಜನಿಕರ ಸಮಸ್ಯೆಗಳು ಹಾಗೆ ಇರುತ್ತದೆ ಅದಕ್ಕೆ ಪರಿಹಾರ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚರಿಕಾ ಕ್ರಮ ಕೈಗೊಳ್ಳಬೇಕು.
ವಿದ್ಯುತ್ ಇಲಾಖೆ ನಿರ್ಲಕ್ಷ್ಯದಿಂದ ಮಹಿಳೆ ಸಾವು ಸಂಭವಿಸಿದೆ, ಮೊದಲೇ ಅಧಿಕಾರಿಗಳು ಕ್ರಮ ಕೈಗೊಂಡಿದ್ದರೆ ಈ ರೀತಿ ಅವಘಡ ನಡೆಯುತ್ತಿರಲಿಲ್ಲ, ಮಲೆನಾಡು ಬಾಗವಾದ ಅರೇಹಳ್ಳಿ ಯಲ್ಲಿ ಮರಳು ಮಾಫಿಯ ಜೋರಾಗಿ ನಡೆಯುತ್ತಿದೆ, ರಾಜಾರೋಷವಾಗಿ ಮರಳನ್ನು ಸಾಗಿಸುತಿದ್ದಾರೆ, ಆದರೆ ಬಡವರು ಮನೆ ಕಟ್ಟಿಕೊಳ್ಳಲು ಮರಳಿನ ಅಭಾವ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ, ಮರಳು ಲಾರಿಗಳ ಸಂಚಾರದಿಂದ ರಸ್ತೆಗಳೆಲ್ಲ ಹಾಳಾಗಿದ್ದು ಶಾಲಾ ಮಕ್ಕಳು ವಾಹನ ಸವಾರರು ಹರಸಾಹಾಸ ಪಡಬೇಕಿದೆ, ಇದಕೆಲ್ಲ ಅಧಿಕಾರಿಗಳೇ ಹೊಣೆ, ಕಾಫೀ ತೋಟದ ಮಾಲೀಕರು ಮರದ ಡಿಮ್ಮಿಗಳನ್ನು ರಸ್ತೆಗಳಲ್ಲಿ ಹಾಕುವುದರಿಂದ ಓಡಾಡುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಅರಣ್ಯ ಇಲಾಖೆ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ವಿದ್ಯುತ್ ತಂತಿ ಸಾಗುವ ಕಡೆ ಮರದ ರಂಬೆಗಳನ್ನು ಕಡಿದು ನಿರಂತರ ವಿದ್ಯುತ್ ಬಳಕೆಗೆ ಸಹಕರಿಸಬೇಕು ಅಧಿಕಾರಿಗಳು ಧೈರ್ಯದಿಂದ ಕೆಲಸ ಮಾಡಿದರೆ ಮಾತ್ರ ಸಾರ್ವಜನಿಕರ ಕೆಲಸ ಸುಗಮವಾಗಲು ಸಾಧ್ಯ,
ಬಿಜೆಪಿ ಶಾಸಕರಿಗೆ ತಾಲ್ಲೂಕ್ಕಿನ ಸಮಸ್ಯೆಗಳ ಬಗ್ಗೆ ಮಾರ್ಗದರ್ಶನ ನೀಡಬೇಕು, ಕಾನೂನು ಮಿತಿಯಲ್ಲಿ ಕೆಲಸವನ್ನು ಮಾಡಬೇಕು, ನೂತನ ಶಾಸಕರು ಸರ್ಕಾರದಿಂದ ಅನುದಾನ ತಂದು ತಾಲ್ಲೂಕಿನ ಅಭಿರ್ವಿದ್ದಿಗೆ ಸಹಕರಿಸಬೇಕಂಡರು
ಸಂಸದರ ಅನುದಾನವನ್ನು ತಡೆಹಿಡಿಯಲು ಬಿಜೆಪಿ ಶಾಸಕರಿಗೆ ಯಾವುದೇ ಹಕ್ಕಿಲ್ಲ, ಅನುದಾನ ತರುವುದು ಎಷ್ಟು ಕಷ್ಟ ಎಂದು ಅವರಿಗೆ ತಿಳಿದಿಲ್ಲ, ಎಲ್ಲಾ ಕಾಮಗಾರಿಗಳನ್ನು ತಡೆಹಿಡಿದಿರುವುದು ಅರ್ಥವಾಗುತ್ತಿಲ್ಲ ಇದು ಬೇಜವಾಬ್ದಾರಿ ಕೆಲಸ, ಅವರು ಮೊದಲು ಅನುದಾನವನ್ನು ತಂದು ಕೆಲಸ ಮಾಡಲಿ ಅದನ್ನು ಬಿಟ್ಟಿ ಯಾರೂ ತಂದಿರುವ ಅನುದಾನದ ಕೆಲಸವನ್ನು ತಡೆಹಿಡಿತ್ತಿರುವುದು
ಆಸ್ಯಾಸ್ಪದ, ಸಾರ್ವಜನಿಕರು ತಮ್ಮ ಬೇಡಿಕೆಗಳ ಬಗ್ಗೆ ಶಾಸಕರ ವಿರುದ್ಧ ಪ್ರತಿಭಟನೆ ಮೂಲಕ ಕೆಲಸ ಮಾಡಿಸಿಕೊಳ್ಳಬೇಕು