Sunday, May 26, 2024

Latest Posts

ಶ್ರೀಕೃಷ್ಣನ ರೆಕಾರ್ಡ್ ಮುರಿಯಬೇಕು ಅಂದುಕೊಂಡಿದ್ದ ಪ್ರಜ್ವಲ್ ರೇವಣ್ಣ: ಆರ್‌.ಬಿ.ತಿಮ್ಮಾಪುರ್ ವಿವಾದಾತ್ಮಕ ಹೇಳಿಕೆ

- Advertisement -

Political News: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿದ್ದು, ಈ ಬಗ್ಗೆ ಸಚಿವ ಆರ್.ಬಿ.ತಿಮ್ಮಾಪುರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ್ರಜ್ವಲ್ ಶ್ರೀಕೃಷ್ಣನ ರೆಕಾರ್ಡ್ ಬ್ರೇಕ್ ಮಾಡಬೇಕು ಅಂದುಕೊಂಡಿದ್ದ. ಆದರೆ ಇದು ಗಿನ್ನಿಸ್ ದಾಖಲೆಯಾಗಬಹುದೆನೋ ಎಂದು ತಿಮ್ಮಾಪುರ್ ಹೇಳಿದ್ದಾರೆ. ಶ್ರೀಕೃಷ್ಣನಲ್ಲಿ ಸ್ತ್ರೀಯರು ಭಕ್ತಿಯಿಂದ ಲೀನವಾಗುತ್ತಿದ್ದರು, ಆದರೆ ಇಲ್ಲಿ ಹಾಗಲ್ಲ, ಪ್ರಜ್ವಲ್ ಶ್ರೀಕೃಷ್ಣ ರೆಕಾರ್ಡ್ ಮುರಿಯಬೇಕೆಂದು ಹೊರಟಿದ್ದರು. ಆದರೆ ಇದು ಗಿನ್ನಿಸ್ ರೆಕಾರ್ಡ್ ಆಗುವ ಹಾಗಿದೆ ಎಂದು ತಿಮ್ಮಾಪುರ್ ಹೇಳಿಕೆ ನೀಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ಹೊರಹಾಕಿರುವ ತಿಮ್ಮಾಪುರ್, ಜನರು ನಮ್ಮ ಕೊಡುಗೆಗಳನ್ನು ಮೆಚ್ಚಿ ಕರ್ನಾಟಕದಲ್ಲಿ ನಮ್ಮನ್ನು ಗೆಲ್ಲಿಸಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ತಿಮ್ಮಾಪುರ್ ಹೇಳಿದ್ದಾರೆ.

ನೇಹಾ ಹಿರೇಮಠ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅಮಿತ್ ಶಾ..!

ಮೊದಲ ಬಾರಿ ಅಯೋಧ್ಯೆಗೆ ಭೇಟಿ ನೀಡಿ ರಾಮನ ದರ್ಶನ ಮಾಡಿದ ದ್ರೌಪದಿ ಮುರ್ಮು

ರಾಮನಗರ ಶಾಸಕರ ವೀಡಿಯೋ ವೈರಲ್

- Advertisement -

Latest Posts

Don't Miss