ಹುಬ್ಬಳ್ಳಿ: ವರ್ಗಾವಣೆ ವಿಚಾರದಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿವೆ. ಬಿಜೆಪಿ ಮೇಲೆ ಕಾಂಗ್ರೆಸ್ ಮಾಡಿದ್ದ ಆರೋಪದ ಹತ್ತು ಪಟ್ಟು ಭ್ರಷ್ಟಾಚಾರ ನಡೆಯುತ್ತಿದೆ. ವರ್ಗಾವಣೆಗಳನ್ನು ಹರಾಜು ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾತನಾಡಿದ ಅವರು, 10, 12 ಲಕ್ಷ ಕೊಟ್ಟವರಿಗೆ ವರ್ಗಾವಣೆ ಮಾಡಲಾಗಿದೆ.
ಧಾರವಾಡ ಜಿಲ್ಲೆಯಲ್ಲಿಯೂ ಈ ರೀತಿಯ ಹರಾಜು ಪ್ರಕ್ರಿಯೆ ನಡೆದಿದೆ.ಅಧಿಕಾರಿಗಳು ನನ್ನ ವಯಕ್ತಿಕವಾಗಿ ಕರೆ ಮಾಡಿ ನೋವು ನೋಡಿಕೊಳ್ಳುತ್ತಿದ್ದಾರೆ ಎಂದರು.
ರಾಹುಲ್ ಗಾಂಧಿ ಶಿಕ್ಷೆ ತಡೆಯಾಜ್ಞೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿಯವರ ಶಿಕ್ಷೆಯನ್ನು ಕೋರ್ಟ್ ತಡೆದಿದೆ ಹೊರೆತು ಅವರು ಮಾಡಿದ್ದು ಸರಿ ಅಂತ ಒಪ್ಪಿಕೊಂಡಿಲ್ಲ. ಮಾತನಾಡಿದ್ದು ತಪ್ಪು ಅಂತ ಹೇಳಿದೆ. ಕೋರ್ಟ್ ತೀರ್ಪು ಆಧರಸಿ ಸ್ಪೀಕರ್ ರಾಹುಲ್ ಗಾಂಧಿ ಸಂಸದ ಸ್ಥಾನದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ರಾಹುಲ್ ಗಾಂಧಿಯ ಅವರ ಪ್ರಕರಣದಲ್ಲಿ ಯಾವುದೇ ರಾಜಕೀಯ ಇಲ್ಲ, ಅದು ನ್ಯಾಯಾಲಯದ ವಿಚಾರ ಎಂದರು.
ಗೃಹ ಜ್ಯೋತಿ ಅರ್ಜಿ ಸಲ್ಲಿಕೆ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿದ್ದವು ಈಗ ಅದೇ ಮುಂದುವರಿದಿದೆ. ದಿನ ಬಳಕೆ ವಿದ್ಯುತ್ ದರ ಜಾಸ್ತಿ ಮಾಡಿ ಯೋಜನೆ ಜಾರಿ ಮಾಡಲಾಗಿದೆ. ರಾಜಸ್ಥಾನದಲ್ಲಿ ಹೀಗೆ ಫ್ರೀ ವಿದ್ಯುತ್ ಕೊಡತ್ತೇವೆ ಅಂತ ಹೇಳಿ ವಿದ್ಯುತ್ ದರ ಏರಿಕೆ ಮಾಡಿದ್ದಾರೆ. ಅಲ್ಲದೆ ಯೋಜನೆ ಪಡೆಯಲು ಬಹಳಷ್ಟು ಷರತ್ತು ವಿಧಿಸಿದ್ದಾರೆ. ಜನ ಇದನ್ನು ಗಮನಿಸುತ್ತಿದ್ದಾರೆ, ಇದಕ್ಕೆ ಸೂಕ್ತ ಉತ್ತರ ನೀಡುತ್ತಾರೆ ಎಂದರು.
ಅರಗ ಜ್ಞಾನೇಂದ್ರ ಖರ್ಗೆ ಮತ್ತು ಕಲ್ಯಾಣ ಕರ್ನಾಟಕದ ಅವಹೇಳನಕಾರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,ಅವರ ಹೇಳಿಕೆ ನಮ್ಮ ವಿರೋಧವಿದೆ..ಖರ್ಗೆಯವರ ಬಗ್ಗೆ ಜ್ಞಾನೇಂದ್ರ ಆ ರೀತಿ ಮಾತನಾಡಬಾರದಿತ್ತು. ರಾಜಕೀಯ ವಿಚಾರವಾಗಿ ಖರ್ಗೆ ಮತ್ತು ನಮ್ಮ ನಡುವೆ ಸಾಕಷ್ಟು ಭಿನ್ನಾಭಿಪ್ರಾಯವಿದೆ. ಆದರೆ ವೈಯಕ್ತಿಕವಾಗಿ ಖರ್ಗೆ ಅನುಭವ, ಹಿರಿತನದ ಬಗ್ಗೆ ಗೌರವವಿದೆ. ಯಾವುದೇ ವ್ಯಕ್ತಿ ಮೈ ಬಣ್ಣ, ಪ್ರದೇಶ ನೋಡಿ ಮಾತನಾಡುವುದು ಸರಿಯಲ್ಲ. ಈ ಕುರಿತು ನಾನು ಜ್ಞಾನೇಂದ್ರಗೆ ತಿಳಿ ಹೇಳುತ್ತೇನೆ ಎಂದರು.
ಉಡುಪಿ ಹಾಸ್ಟೆಲ್ ವಿಡಿಯೋ ಮತ್ತು ಹುಬ್ಬಳ್ಳಿ ಕಾಲೇಜು ಪೋಸ್ಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಮಾಜ ವಿದ್ರೋಹಿಗಳಿಗೆ ಕಾಂಗ್ರೆಸ್ ಬಂದಿದ್ದು ಕುಮ್ಮಕ್ಕು ಸಿಕ್ಕಂತಾಗಿದೆ. ನಾವು ಏನು ಮಾಡಿದರು ಕಾಂಗ್ರೆಸ್ ಪಾರ್ಟಿ ಸಂರಕ್ಷಣೆ ನೀಡುತ್ತೆ ಅಂತ ಇದನ್ನು ಮಾಡಲಾಗುತ್ತಿದೆ..ಹೀಗಾಗಿ ಇಂತಹ ಕೃತ್ಯ ನಡೆಯುತ್ತಿದೆ ಎಂದರು.
Provision store: ಅಂಗಡಿಗೆ ಬಂದಿದ್ದ ಯುವತಿಯನ್ನು ಚುಡಾಯಿಸಿದ ಪುಂಡರು
Hospital visit: ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಡೀರ್ ಭೇಟಿ ನೀಡಿದ ವಿಜಯ್ ಸಿಂಗ್
Hospital visit: ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಡೀರ್ ಭೇಟಿ ನೀಡಿದ ವಿಜಯ್ ಸಿಂಗ್

