ಟೋಕಿಯೊ: ಅಗ್ರ ಆಟಗಾರ ಎಚ್.ಎಸ್.ಪ್ರಣಯ್ ಪ್ರತಿಷ್ಠಿತ ಬಿಡಬ್ಲ್ಯುಎ ಚಾಂಪಿಯನ್‍ಶಿಪ್‍ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‍ನಲ್ಲಿ ಪ್ರಣಯ್, 76 ನಿಮಿಷಗಳ ಕಾಲ ಯುವ ಆಟಗಾರ ಲಕ್ಷ್ಯ ಸೇನ್ ವಿರುದ್ಧ 17-21, 21-16, 21-17 ಅಂಕಗಳಿಂದ ಮಣಿಸಿ ಕ್ವಾರ್ಟರ್ ಪ್ರವೇಶಿಸಿದರು.
ಮೊದಲ ಸುತ್ತಿನಲ್ಲಿ ಪ್ರಣಯ್3-0 ಮುನ್ನಡೆ ಪಡೆದರು. ಆದರೆ ತಪ್ಪುಗಳು ಲಕ್ಷ್ಯಸೇನ್‍ಗೆ ಲಾಭಾವಾಯಿತು. ಕೂಡಲೇ ಎಚ್ಚೆತ್ತ ಪ್ರಣಯ್ 4-4 ಸಮಬಲ ಸಾಸುವಲ್ಲಿ ಯಶಸ್ವಿಯಾದರು. ವಿರಾಮದ ವೇಳೆಗೆ ಲಕ್ಷ್ಯ ಅಂಕ ಹೆಚ್ಚಿಸಿಕೊಂಡು ಗೆದ್ದರು.
ಎರಡನೆ ಸೆಟ್‍ನಲ್ಲಿ ಪ್ರಣಯ್6-3,14-12, ,21-16 ಅಂಕಗಳಿಂದ ಗೆದ್ದರು.ನಿರ್ಣಾಯಕ ಮೂರನೆ ಸೆಟ್‍ನಲ್ಲಿ ಇಬ್ಬರು ಸಮಬಲದ ಹೋರಾಟ ನೀಡಿದರು. ಆದರೆ ಪ್ರಣಯ್ 11-8 ಅಂಕಗಳ ಮುನ್ನಡೆ ಪಡೆದರು. ವಿರಾಮದ ನಂತರ ಪ್ರಣಯ್ ಆಕ್ರಮಣಕಾರಿ ಅಟವಾಡಿ ವಿಜಯಿಯಾದರು.
ಇನ್ನು ಪುರುಷರ ಡಬಲ್ಸ್‍ನಲ್ಲಿ ಕಪೀಲಾ ಮತ್ತು ಅರ್ಜುನ್ ಜೋಡಿ ಸಿಂಗಾಪುರದ ಲೊಹ್ ಮತ್ತು ಟೆರ್ರಿ ಜೋಡಿಯನ್ನು 18-21, 21-15 ಮತ್ತು 21-16 ಅಂಕಗಳಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಮಹಿಳಾ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‍ನಲ್ಲಿ ಸೈನಾ ನೆಹ್ವಲ್ ಥಾಯ್‍ಲ್ಯಾಂಡ್‍ನ ಬುಸಾನಾನ್ ವಿರುದ್ಧ 17-21, 21-16, 13-21 ಅಂಕಗಳಿಂದ ಸೋತು ಟೂರ್ನಿಯಿಂದ ಹೊರ ಬಿದ್ದರು.