- Advertisement -
Hubli News: ಹುಬ್ಬಳ್ಳಿ: ಹಿಂದೂಗಳೆಲ್ಲರೂ ಒಟ್ಟಾದರೇ ಮೈದಾನದಲ್ಲಿ ತುಂಡುಗೋಡೆ ಇರುವುದಿಲ್ಲ ಎಂದು ಮುಸ್ಲಿಂ ಪ್ರಾರ್ಥನಾ ಮಂದಿರದ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗಣಪತಿ ವಿಸರ್ಜನೆ ವೇಳೆ ಭಾಷಣದಲ್ಲಿ ಸಂದರ್ಭದಲ್ಲಿ ಮಾತನಾಡಿದ ಅವರು,ನೀವೆಲ್ಲರೂ ಒಟ್ಟಾದರೇ ತುಂಡುಗೋಡೆಯೇ ಇರುವುದಿಲ್ಲ. ದೇಶದಲ್ಲಿ ವಿದ್ರೋಹಿಗಳ ವಿರುದ್ಧ ಜಾಗೃತರಾಗಲು ಗಣೇಶೋತ್ಸವ ಬಳಿಸಿಕೊಳ್ಳಬೇಕು ಎಂದರು.
ಡಿಜೆ ನಿಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಮಾಡಿರುವುದು ಹಿಂದೂ ವಿರೋಧಿ ಸರ್ಕಾರ. ಅಲ್ಪಸಂಖ್ಯಾತ ಓಲೈಕೆಗಾಗಿ ರಾಜ್ಯ ಸರ್ಕಾರ ಹಲವಾರು ಕಾರ್ಯವನ್ನು ಮಾಡುತ್ತಿದೆ ಎಂದು ಅವರು ಹೇಳಿದರು.
- Advertisement -

