Hubli News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಗೂ ನನಗೂ ಒಂದು ಅವಿನಾಭಾವ ಸಂಬಂಧವಿದೆ. ನನಗೆ ಉದ್ಯೋಗ ಕೊಟ್ಟು ಅನ್ನಹಾಕಿದವರು ಇದೇ ಊರಿನವರು. ನನ್ನ ಪುಸ್ತಕ ಪ್ರಕಾಶನ ಮಾಡಿದ ಪ್ರಕಾಶಕರು ಇದೇ ಊರಿನವರು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ರಾಣಿ ಚೆನ್ನಮ್ಮ ಮೈದಾನದ ಗಣಪತಿ ವಿಸರ್ಜನೆ ವೇಳೆ ಮಾತನಾಡಿದ ಅವರು, 1989ರ ನಂತರ ಕಾಶ್ಮೀರದಲ್ಲಿ ಮಸೀದಿ ಮೈಕ್ ಸೆಟ್ ನಲ್ಲಿ ಆಸ್ತಿಪಾಸ್ತಿ ಬಿಟ್ಟು, ಹೆಂಡತಿ ಮಕ್ಕಳನ್ನು ಬಿಟ್ಟು ಹೋಗಬೇಕು ಎಂದು ಕರೆ ಬರ್ತಿತ್ತು. ಆದರೇ ಈಗ ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಅದೇ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿ ಹೋರಾಟದ ಕಿಚ್ಚು ಹೊತ್ತಿತ್ತು. ಈದ್ಗಾ ಮೈದಾನ ಸರ್ಕಾರಿ ಮೈದಾನವಾಗಿದ್ದರೂ ಭಾರತೀಯ ಧ್ವಜ ಹಾರಿಸಲು ವಿರೋಧ ವ್ಯಕ್ತವಾಗಿತ್ತು ಎಂದರು.
ಭಾವುಟ ಹಾರಿಸಿಯೇ ತಿರುತ್ತೇವೆ ಎಂದು ಜನಸಂಘರ್ಷಕ್ಕೆ ಇಳಿದು ಭಾವುಟ ಹಾರಿಸಿದರು. ನಿಜವಾದ ಹಿಂದೂ ಹುಲಿ ಎಂದರೇ ಅನಂತಕುಮಾರ್ ಹೆಗ್ಗಡೆ, ಯತ್ನಾಳ ಅವರ ಬಗ್ಗೆ ನನ್ನಷ್ಟ ಯಾರು ಮಾತಾಡಿಲ್ಲ.ಖಡಕ್ ರೊಟ್ಟಿ ಖಾರದ ಚಟ್ನಿ ತಿನ್ನುವ ವ್ಯಕ್ತಿ ಯತ್ನಾಳ ಅವರನ್ನು ಕಟ್ಟಿ ಹಾಕಲು ಆಗಲ್ಲ ಎಂದು ಅವರು ಹೇಳಿದರು.
ಉಮಾಭಾರತಿಯವರು ಅಧಿಕಾರ ಬಿಟ್ಟು ಬಂದು ಧ್ವಜಾರೋಹಣಕ್ಕಾಗಿ ಅರೆಸ್ಟ್ ಆಗಿದ್ದಾರೆ. ಇಂತಹದೊಂದು ಮೈದಾನದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡ್ತಿದ್ದಾರೆ. ಗಣೇಶೋತ್ಸವ ಮನೆಗೆ ಮಾತ್ರ ಸೀಮಿತವಾಗಿತ್ತು. ಸಿಪಾಯಿ ಧಂಗೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮ ಎಂದು ಹೇಳಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಲಾಗಿತ್ತು. ಶಿವಾಜಿ ಇಲ್ಲದಿದ್ದರೇ ಎಲ್ಲರ ವ್ಯವಸ್ಥೆಯೇ ಬೇರೆ ಆಗಿರುತಿತ್ತು. ಜನರನ್ನು ಒಟ್ಟು ಸೇರಿಸಲು ಸಾರ್ವಜನಿಕ ಗಣೇಶೋತ್ಸವ ಪ್ರಾರಂಭವಾಯಿತು. ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಕಿಚ್ಚು ಹಚ್ಚಿದ್ದು ಗಣೇಶೋತ್ಸವ ಎಂದು ಅವರು ಹೇಳಿದರು.

