Friday, April 18, 2025

Latest Posts

ಪ್ರತಾಪ್ ಸಿಂಹ ನಿನಗೆ ತಾಕತ್ತಿದ್ರೆ ಡಿಸಿ ವರ್ಗಾವಣೆ ಮಾಡಿಸು

- Advertisement -

ಮೈಸೂರು : ಮೈಸೂರಿನಲ್ಲಿ ಕೋವಿಡ್ ಕೂಡ ಜೋರಾಗಿದೆ ಹಾಗೆಯೇ ರಾಜಕಾರಣದ ಜಿದ್ದಾಜಿದ್ದಿ ಸಹ ಜೋರಾಗಿ ನಡೀತಿದೆ. ಮೈಸೂರಿನಲ್ಲಿ ಅಧಿಕಾರಿಗಳು ಈ ಹಿಂದೆ ಇದ್ದಂತ ಡಿಸಿ ಶಿಖಾ, ಅಭಿರಾಮ್ ರೀತಿ ಕೆಲಸ ಮಾಡಬೇಕು ಅಂತ ಹೇಳಿಕೆ ಕೊಡುವ ಮೂಲಕ ಪ್ರಸ್ತುತ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಜಿ ಸಚಿವ ಚಾಮುಂಡೇಶ್ವರಿ ಶಾಸಕ ಜಿಟಿ ದೇವೇಗೌಡ ಹರಿಹಾಯ್ದಿದ್ದಾರೆ. ಹಾಗೆಯೇ ಸಾರಾ ಮಹೇಶ್ ಮೈಸೂರಿನಲ್ಲಿ ಒಳ್ಳೆಯ ಕೆಲಸ ಮಾಡ್ತಿದ್ದಾರೆ ಅಂತ ಹೇಳಿಕೆ ಕೊಡುವ ಮೂಲಕ ಬಿಜೆಪಿ ಶಾಸಕರೂ ಸೇರಿದಂತೆ ಇತರೆ ಶಾಸಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.. ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಜಿಟಿ ದೇವೇಗೌಡ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ. ಇದುವರೆಗೂ ರೋಹಿಣಿ ಸಿಂಧೂರಿಯವರನ್ನ ಹೊಗಳಿ ಇದೀಗ ತೆಗಳಲು ಸಂಸದ ಪ್ರತಾಪ್ ಸಿಂಹ ಶುರು ಮಾಡಿದ್ದಾರೆ.. ಅವರಿಗೆ ಸಿಎಂ, ಪಿಎಂ ಗೊತ್ತಲ್ವಾ.. ತಾಕತ್ ಇದ್ರೆ ಅವರನ್ನ ವರ್ಗಾವಣೆ ಮಾಡಿಸಲಿ ಅಂತ ಪ್ರತಾಪ್ ಸಿಂಹಗೆ ಸವಾಲು ಹಾಕಿದ್ದಾರೆ.. ಜೊತೆಗೆ ಹಲವು ಶಾಸಕರು ಸ್ವಂತ ಹಣದಲ್ಲಿ ಕೆಲಸ ಮಾಡ್ತಿದ್ದಾರೆ.. ಕೇವಲ ಕೆ.ಆರ್ ನಗರ ಶಾಸಕ ಮಾತ್ರ ಮಾಡ್ತಿಲ್ಲ ಅಂತ ಪ್ರತಾಪ್ ಸಿಂಹಗೆ ಕುಟುಕಿದ್ದಾರೆ.. ಸಾರಾ ಮಹೇಶ್ ಸಹ ಪದೇ ಪದೇ ರೋಹಿಣಿ ಸಿಂಧೂರಿಯವರನ್ನ ಟೀಕೆ ಮಾಡ್ತಿದ್ದಾರೆ. ಈ ಹಿನ್ನೆಲೆ ಸಾರಾ ಮಹೇಶ್ ಗಾಳಿ ಪ್ರತಾಪ್ ಸಿಂಹಗೂ ಬೀಸಿರಬೇಕು ಅಂತ ವಿರೋಧಿಗಳು ಮಾತನಾಡುತಿದ್ದಾರೆ. ಜೊತೆಗೆ ಉಸ್ತುವಾರಿ ಸಚವ ಸೋಮಶೇಖರ್ ಕಾಲಿಗೆ ಚಕ್ರಕಟ್ಟಿಕೊಂಡವರAತೆ ಮೈಸೂರಿನಲ್ಲಿ ಕೆಲಸ ಮಾಡ್ತಿದ್ದಾರೆ. ಆದ್ರೆ, ಪ್ರತಾಪ್ ಸಿಂಹ ಹೇಳಿಕೆ ಇದೀಗ ಎಲ್ಲರನ್ನೂ ಕೆರಳಿಸಿದೆ. ಈಗಾಗಲೇ ರಾಮದಾಸ್ ಸಹ ಪ್ರತಾಪ್ ಸಿಂಹ ವಿರುದ್ಧ ಸಿಡಿದೆದ್ದಿದ್ದಾರೆ.. ಮಂಡ್ಯ ಸಂಸದೆ ಸುಮಲತಾ ವಿರುದ್ಧ ಕಿಡಿಕಾರುವ ಪ್ರತಾಪ್ ಸಿಂಹ ಇದೀಗ ಸಾರಾ ಮಹೇಶ್ ಜೊತೆಯಾಗಿ ಮತ್ತೇನೋ ಸಂದೇಶ ಸಾರಲು ಹೊರಟ್ಟಂತೆ ಕಾಣ್ತಿದೆ..

- Advertisement -

Latest Posts

Don't Miss