Saturday, March 15, 2025

Latest Posts

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ: ಪುತ್ತೂರು, ಸುಳ್ಯ ತಾಲೂಕಿನ ವಿವಿದೆಡೆ ಬೀಡು ಬಿಟ್ಟ ಎನ್ಐಎ ತಂಡ

- Advertisement -

,Manglore News:

ದಕ್ಷಿಣ ಕನ್ನಡದಲ್ಲಿ ನಡೆದ  ಆ ಒಂದು ಕೊಲೆ  ಇಡೀ   ಬಿಜೆಪಿಯನ್ನೇ ಒಂದೊಮ್ಮೆ ನಡುಗಿಸಿತ್ತು. ಹೌದು ಜುಲೈ  26 ರಂದು  ನಡೆದ ಪ್ರವೀಣ್  ನೆಟ್ಟಾರ್ ಹತ್ಯೆ  ಪ್ರಕರಣ ರಾಜ್ಯದಲ್ಲಿ  ಸಂಚಲನ ಮೂಡಿಸಿತ್ತು.  ಇನ್ನು ಕೇಸ್ ತನಿಖೆ ನಡೆಯುತ್ತಲೇ ಇದೆ. ಹೌದು  ಇದೀಗ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ಸೆ.6ರಂದು ಬೆಳ್ಳಂಬೆಳಗ್ಗೆ ಎನ್​ಐಎ ಅಧಿಕಾರಿಗಳ ತಂಡ ಪುತ್ತೂರು, ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.

ಮನೆ, ಕೆಲ ಖಾಸಗಿ ಕಟ್ಟಡಗಳು ಸೇರಿದಂತೆ ಒಟ್ಟು 32 ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎನ್ಐಎ ಅಧಿಕಾರಿಗಳ  ತಂಡ. ಆರೋಪಿಗಳು ಮತ್ತು ಆರೋಪಿಗಳಿಗೆ ಸಹಕರಿಸಿದವರ ವಿಚಾರಣೆ ನಡೆಯುತ್ತಿದ್ದು, ಎನ್​ಐಎ ಅಧಿಕಾರಿಗಳ ತಂಡಕ್ಕೆ ರಾಜ್ಯ ಪೊಲೀಸರು ಸಹಕಾರ ನೀಡುತ್ತಿದ್ದಾರೆ ಎಂದು  ಹೇಳಲಾಗುತ್ತಿದೆ.

ನಂದಿಬೆಟ್ಟದಲ್ಲಿ ಗುಡ್ಡ ಕುಸಿತ: ಆತಂಕದಲ್ಲಿ ಗ್ರಾಮಸ್ಥರು:

ಬೆಂಗಳೂರು ಮಹಾ ಮಳೆಗೆ ಜನಜೀವನ ಹೈರಾಣ: ಅನ್ನ- ನೀರಿಗೂ ಪರದಾಟ..!

ಚಿತ್ರದುರ್ಗ: ಪೊಲೀಸ್ ಠಾಣೆಗೂ ಜಲದಿಗ್ಬಂಧನ

- Advertisement -

Latest Posts

Don't Miss