- Advertisement -
ಬೆಂಗಳೂರು : ಯುವ ಪತ್ರಕರ್ತರು ಸೇರಿ ಪ್ರಾರಂಭ ಮಾಡಿರುವ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾಗೆ ಉತ್ತಮ ಭವಿಷ್ಯವಿದೆ ಎಂದು ಬೆಂಗಳೂರು ವಿವಿ ನಿವೃತ್ತ ರಿಜಿಸ್ಟ್ರಾರ್ ಪ್ರೋ ನಿಂಗೇಗೌಡರು ತಿಳಿಸಿದ್ರು. ಕಚೇರಿಗೆ ಭೇಟಿ ನೀಡಿ ಮಾತನಾಡಿದ ನಿಂಗೇಗೌಡರು ಶಿವಕುಮಾರ್ ಮತ್ತು ತಂಡದ ಕಾರ್ಯವನ್ನ ಶ್ಲಾಘಿಸಿದ್ರು.

ಡಿಜಿಟಲ್ ಮಾಧ್ಯಮದಲ್ಲಿ ಕರ್ನಾಟಕ ಟಿವಿ ಗಟ್ಟಿಯಾಗಿ ಬೇರೂರಲಿದೆ – ಗುರುಲಿಂಗಸ್ವಾಮಿ
ಇನ್ನು ಕಾರ್ಯಕ್ರಮದಲ್ಲಿ ಭಾಗಿಯಾದ ಹಿರಿಯ ರಾಜಕೀಯ ಪತ್ರಕರ್ತ ಪ್ರಸ್ತುತ ಗೃಹ ಸಚಿವರ ಮಾಧ್ಯಮ ಸಂಯೋಜಕರಾದ ಗುರುಲಿಂಗಸ್ವಾಮಿ, ಶಿವಕುಮಾರ್ ನೇತೃತ್ವದ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ ಕಾರ್ಯವನ್ನ ಶ್ಲಾಘಿಸಿದ್ರು.. ಶಿವಕುಮಾರ್ ಗೆ ಗೆಲ್ಲುವ ತಂತ್ರ ಗೊತ್ತು ಜೊತೆಗೆ ಹಠವಾದಿ, ಇದ್ದದ್ದು ಇದ್ದಂಗೆ ಹೇಳುವ ಧೈರ್ಯವಂತ. ಹೀಗಾಗಿ ಡಿಜಿಟಲ್ ಮಾಧ್ಯಮದಲ್ಲಿ ಶಿವಕುಮಾರ್ ತಂಡ ಗಟ್ಟಿಯಾಗಿ ಬೇರೂರಲಿದೆ ಅಂತ ತಿಳಿಸಿದ್ರು
- Advertisement -