ನಟಿ ತಾರಾ ಅನುರಾಧ ‘ತುಳಸಿದಳ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡರು. ಬಳಿಕ ‘ಆನಂದ್’, ‘ಗುರಿ’, ‘ಮನೆಯೇ ಮಂತ್ರಾಲಯ’, ‘ರಣರಂಗ’, ‘ಡಾಕ್ಟರ್ ಕೃಷ್ಣ’, ‘ಉಂಡು ಹೋದ ಕೊಂಡು ಹೋದ’, ‘ಬೆಳ್ಳಿ ಕಾಲುಂಗುರ’, ‘ಮುಂಜಾನೆಯ ಮಂಜು’, ‘ಮುದ್ದಿನ ಮಾವ’, ‘ಸಿಪಾಯಿ’, ‘ಕಾನೂರು ಹೆಗ್ಗಡತಿ’, ‘ಹಸೀನಾ’, ‘ಸೈನೈಡ್’, ‘ಈ ಬಂಧನ’, ‘ಶ್ರಾವಣಿ ಸುಬ್ರಮಣ್ಯ’, ‘ಹೆಬ್ಬೆಟ್ ರಾಮಕ್ಕ’, ‘ಬಡವ ರಾಸ್ಕಲ್’ ಹಾಗೂ ಮುಂತಾದ ಸಿನಿಮಾಗಳಲ್ಲಿ ತಾರಾ ಅನುರಾಧಾ ಅಭಿನಯಿಸಿದ್ದಾರೆ. ತಮ್ಮ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ.
ಇತ್ತೀಚಿಗೆ ಕಿರುತೆರೆಯಲ್ಲಿ ‘ರಾಜಾ ರಾಣಿ’ ಹಾಗೂ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಕನ್ನಡ ಚಿತ್ರರಂಗದ ಎವರ್‌ಗ್ರೀನ್ ನಟಿ ತಾರಾ ಅನುರಾಧ ಅವರು 90ರ ದಶಕದಿಂದ ಚಿತ್ರರಂಗದಲ್ಲಿದ್ದಾರೆ. ನಟಿ ತಾರಾ ಅವರು ಸದ್ಯ ಸ್ಯಾಂಡಲ್‌ವುಡ್‌ನ ಬಹು ಬೇಡಿಕೆಯ ಪೋಷಕ ನಟಿ. ಮಧ್ಯಮ ವರ್ಗದ ಅಮ್ಮ, ಖಡಕ್ ಅಧಿಕಾರಿ, ಹಳ್ಳಿ ಹೆಂಗಸು ಹೀಗೆ ಹಲವು ಪಾತ್ರಗಳಲ್ಲಿ ತಾರಾ ನಟಿಸುತ್ತಿದ್ದಾರೆ. ಆದರೆ ಇದೀಗ ನಟಿ ತಾರಾ ಗರ್ಭಿಣಿಯಂತಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಆಕಿದ್ದು, ಇದೀಗ ವೈರಲ್ ಆಗಿದೆ. ನಿಜವಾಗಿಯೂ ತಾರಾ ಗರ್ಭಿಣಿಯಾಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ನಟಿ ತಾರಾ ಅನುರಾಧಾ ನಿಜ ಜೀವನದಲ್ಲಿ ಗರ್ಭಿಣಿಯಾಗಿಲ್ಲ, ಬದಲಿಗೆ ಸಿನಿಮಾದಲ್ಲಿ ಗರ್ಭಿಣಿಯ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ರಾಜೀವ್ ಅಭಿನಯದ ‘ಉಸಿರೇ ಉಸಿರೇ’ ಸಿನಿಮಾದಲ್ಲಿ ನಟಿ ತಾರಾ ನಟಿಸುತ್ತಿದ್ದು, ತುಂಬು ಗರ್ಭಿಣಿಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ