www.karnatakatv.net : ಮಹಾಮಾರಿ ಕೊರೊನಾ ಕಾರಣದಿಂದ ಆರ್ಥಿಕ ಪರಸ್ಥಿತಿ ಎಲ್ಲರಲ್ಲು ಕಾಡುತ್ತಿದೆ. ಯಾವುದೇ ವಸ್ತುವನ್ನು ಖರೀದಿಸಬೇಕೆಂದರು ಹಣವು ಹೆಚ್ಚಾಗುತ್ತಿದೆ. ನೆಮ್ಮದಿಯಾಗಿ ಓಡಾಡಿಕೊಂಡು ಇರೋದಕ್ಕು ಆಗದೇ ಮನೆಯಲ್ಲಿ ಕುಳಿತು ತಿನ್ನೋಕು ಆಗದೇ ಇರುವಂತ ಪರಿಸ್ಥಿತಿ ನಿರ್ಮಾಣ ವಾಗಿದೆ.
ಅಕ್ಟೋಬರ್ ಮೊದಲ ದಿನ ಪೆಟ್ರೋಲಿಯಂ ಕಂಪನಿಗಳು ಅನಿಲದ ಬೆಲೆಯನ್ನು ಹೆಚ್ಚಿಸಿವೆ. 43.5 ರೂ ಗಳಷ್ಟು ಹೆಚ್ಚಿದ್ದು, ಇಂಡಿಯನ್ ಆಯಿಲ್ ಬಿಡುಗಡೆ ಮಾಡಿರುವ ಹೊಸ ದರಗಳ ಪ್ರಕಾರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ 1736.5 ರೂ. ಮೊದಲು ಸಿಲಿಂಡರ್ 1693 ರೂಗಳಲ್ಲಿ ಸಿಗುತ್ತಿತ್ತು ಆದರೆ, ದೇಶೀಯ ಬಳಕೆಗಾಗಿ 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೋಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1805.5 ರೂ ಗೆ ಏರಿಕೆಯಾಗಿದೆ. ಇದು ಮೊದಲು 1770.5 ರೂ ಪೆಟ್ರೋಲಿಯಂ ಕಂಪನಿಗಳು ಪ್ರತಿ 15 ದಿನಗಳಿಗೊಮ್ಮೆ ಎಲ್ ಪಿ ಜಿ ಸಿಲಿಂಡರ್ ಬೆಲೆಯನ್ನು ಪರಿಶೀಲಿಸುತ್ತೆವೆ ಎಂದು ತಿಳಿಸಿದರು.