International News
ಬೆಂಗಳೂರು(ಫೆ.13): ಏಷ್ಯಾ ಅತೀ ದೊಡ್ಡ ಏರ್ ಶೋಗೆ ಪ್ರಧಾನಿ ನರೇಂದ್ರ ಮೋದಿ ಅದ್ಧೂರಿ ಚಾಲನೆ ನೀಡಿದರು. ಎರಡು ವರ್ಷಗಳಿಗೆ ಒಮ್ಮೆ ನಡೆಯುವ ಈ ಏರ್ ಶೋ 5 ದಿನಗಳ ಕಾಲ ಆಕರ್ಷಣೀಯವಾಗಿ ನಡೆಯುತ್ತೆ. ಈ ಏರ್ ಶೋನಲ್ಲಿ 700 ಕ್ಕೂ ಅಧಿಕ ರಾಷ್ಟ್ರಗಳು ಹಾಗೂ 700 ಕ್ಕೂ ಅಧಿಕ ಜನ ಭಾಗಿಯಾಗುವ ನಿರೀಕ್ಷೆಯಿದೆ. ಬಾನಂಗಲದಲ್ಲಿ ಲೋಹದ ಹಕ್ಕಿಗಳ ಹಾರಾಟಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಯಲಹಂಕ ವಾಯುನೆಲೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಬಾನಂಗಲದಲ್ಲಿ ಹಾರಾಡಲಿವೆ ಲೋಹದ ಹಕ್ಕಿಗಳು!
14 ನೇ ಬಾರಿ ಯಲಹಂಕದಲ್ಲಿ ನಡೆಯುವ ಈ ಏರ್ ಶೋದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಏರೋ ಇಂಡಿಯಾದಲ್ಲಿ ಎಫ್-16, ಎಫ್‌ಎ 18ಇ, ಎಫ್‌ಎ 18ಎಫ್ ಸೂಪರ್ ಹಾರ್ನೆಟ್ ಹಾರಾಡಲಿವೆ. ಅಮೆರಿಕ ನೌಕಾಪಡೆಯ ಮಲ್ಟಿರೋಲ್ ಸ್ಟ್ರೈಕ್ ಫೈಟರ್, ಜತೆಗೆ ಸಿವಿಡಬ್ಲ್ಯೂ-5 ಕ್ಯಾರಿಯರ್ ಏರ್ ವಿಂಗ್ ಸೇರಿ ಇನ್ನಿತರ ಯುದ್ಧ ವಿಮಾನಗಳು ಪ್ರದರ್ಶನ ನೀಡಲಿವೆ.
ಭಾರತದ ಈ ಹೆಮ್ಮೆಯ ರಕ್ಷಣಾ ಮತ್ತು ವೈಮಾನಿಕ ಪ್ರದರ್ಶನದಲ್ಲಿ ಬರೋಬ್ಬರಿ 98 ದೇಶಗಳು ಪಾಲ್ಗೊಳ್ಳುತ್ತಿವೆ. ನಿನ್ನೆ ಭಾನುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದರು. ಏರೋ ಇಂಡಿಯಾ ಶೋನಲ್ಲಿ ಕೇವಲ ವೈಮಾನಿಕ ಶಕ್ತಿ ಪ್ರದರ್ಶನ ಮಾತ್ರವಲ್ಲ ವಿಶ್ವಾದ್ಯಂತ ರಕ್ಷಣಾ ಕ್ಷೇತ್ರಗಳ 809 ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಡುತ್ತಿವೆ. ಅದಕ್ಕಾಗಿ ಯಲಹಂಕದ ಐಎಎಫ್ ನಿಲ್ದಾಣದಲ್ಲಿ 35 ಸಾವಿರ ಚದರ ಮೀಟರ್ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಹಲವಾರು ಜನ ಯಲಹಂಕದತ್ತ ಬರುತ್ತಿದ್ದಾರೆ, ಇನ್ನು ಹಲವೆಡೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.