Sunday, September 8, 2024

Latest Posts

ದಾವಣಗೆರೆಯಲ್ಲಿ ಮೋದಿ ಮಾತಿನ ಮೋಡಿ

- Advertisement -

political news:

ಕೇವಲ 40 ದಿನಗಳ ಬಾಕಿ ಉಳಿದಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ  ನಿರಂತರವಾಗಿ ಮೇಲಿಂದ ಮೇಲೆ ನವೀನ ಕಾರ್ಯ ಕ್ರಮಗಳನ್ನು ಮಾಡುವ ಮೂಲಕ ಈ ಬಾರಿ ಮತ್ತೊಮ್ಮೆ ಬಹುಮತವನ್ನು ಸಾಧಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ.

ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಬಿಜೆಪಿ ಪಕ್ಷ ಮೇಲಿಂದ ಮೇಲೆ ಪ್ರಧಾನಿಯವರನ್ನು ರಾಜ್ಯಕ್ಕೆ ಕರೆಸಿಕೊಳ್ಳುವ ಮೂಲಕ ಕಾರ್ಯಕ್ರಮಗಳನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ಹಮ್ಮಿಕೊಂಡು ರಾಜ್ಯದ ಪ್ರತಿ ಜಿಲ್ಲೆಗೂ ಪ್ರಧಾನಿಯವರನ್ನು ಬೇಟಿ ಮಾಡಿಸಿ ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟುಅವರ ಭಾಷಣದ ಮೂಲಕ ಮಅತಿನ ಮೋಡಿಯ ಮೂಲಕ ಜನರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ.

ನಿನ್ನೆ ದಾವಣಗೆರೆಯಲ್ಲಿ ಮಾತನಾಡಿದ ಪ್ರಧಾನಿಯವರು  ಕ್ಷಿಪ್ರಗತಿಯ ಅಭಿವೃದ್ಧಿಯು ಈ ಕಾಲದ ಅಗತ್ಯವಾಗಿದೆ. “ಕುಶಲ ರಾಜಕಾರಣ”ದಿಂದ ರಾಜ್ಯವನ್ನು ಹೊರತರಲು ಕರ್ನಾಟಕದ ಜನತೆ ಸಹಾಯ ಮಾಡಬೇಕೆಂದು ಒತ್ತಾಯಿಸಿದರು.ಬಿಜೆಪಿಯು ರಾಜ್ಯವನ್ನು ಅಭಿವೃದ್ಧಿ ಹೊಂದಿದ ಭಾರತದ ಚಾಲಕ ಶಕ್ತಿಯನ್ನಾಗಿ ಮಾಡಲು ಬಯಸಿದೆ, ಆದರೆ ಕಾಂಗ್ರೆಸ್ ಅದನ್ನು “ತನ್ನ ನಾಯಕರ ಖಜಾನೆ ತುಂಬುವ ಎಟಿಎಂ ಮಾಡಲು ನೋಡುತ್ತಿದೆ ಎಂದು ಆರೋಪಿಸಿದರು.

ಕರ್ನಾಟಕವು ದೀರ್ಘಾವಧಿಯ ಅವಕಾಶವಾದಿ ಮತ್ತು ಸ್ವಾರ್ಥಿ ಸಮ್ಮಿಶ್ರ ಸರ್ಕಾರಗಳನ್ನು ಕಂಡಿದೆ. ಅಂತಹ ಸರ್ಕಾರಗಳಿಂದ ಕರ್ನಾಟಕವು ನಷ್ಟವನ್ನು ಎದುರಿಸುತ್ತಿದೆ. ಆದ್ದರಿಂದ, ಕರ್ನಾಟಕದ ವೇಗದ ಅಭಿವೃದ್ಧಿಗೆ ಬಿಜೆಪಿಯ ಪೂರ್ಣ ಬಹುಮತ ಮತ್ತು ಸ್ಥಿರ ಸರ್ಕಾರ ಅಗತ್ಯವಿದೆ ಎಂದು ಮೋದಿ ಹೇಳಿದರು.

ಉರಿ ಹಚ್ಚಿಸುತ್ತಿರುವ ಉರೀಗೌಡ ನಂಜೇಗೌಡ ಸ್ಟೋರಿ

ಯುಗಾದಿ ಹಬ್ಬಕ್ಕೆ ಚಿನ್ನದ ನಾಣ್ಯ ಉಡುಗೊರೆ ನೀಡಿದ ಮಹಾನಟಿ ಕೀರ್ತಿ ಸುರೇಶ್

ಸಿಹಿ ಪೊಂಗಲ್ ರೆಸಿಪಿ..

- Advertisement -

Latest Posts

Don't Miss