Sunday, December 22, 2024

Latest Posts

ಖಾಸಗಿ ಇಂಜಿನಿಯರಿಂಗ್ ಶುಲ್ಕ ಹೆಚ್ಚಳ ಮಾಡದಂತೆ ಸೂಚನೆ..!

- Advertisement -

www.karnatakatv.net: ಬೆಂಗಳೂರು : ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳ ಮಾಡದಂತೆ ನಿರ್ದೇಶನ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಕೊರೊನಾ ಮಹಾಮಾರಿ ಮತ್ತು ಲಾಕ್ ಡೌನ್ ನಿಂದಾಗಿ ಪೋಷಕರು ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವದರಿಂದ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಶೇ. 15 ರಿಂದ 20ರವರೆಗೂ ಶುಲ್ಕವನ್ನು ಹೆಚ್ಚು ಮಾಡುವದಾಗಿ ಮನವಿ ಮಾಡಿರುವದನ್ನು ತೆಗೆದು ಹಾಕಲಾಗಿದೆ. ಇದರ ಕುರಿತು ಸಭೆಯಲ್ಲಿ ಚರ್ಚೆಯನ್ನು ಮಾಡಿದಾಗ ಶುಲ್ಕ ಹೆಚ್ಚಳ ಮಾಡದಿರುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೆ ಪ್ರವೇಶ ಒದಗಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವ್ಯವಸ್ಥಿತವಾದ ಕೌನ್ಸೆಲಿಂಗ್ ನಡೆಸಲಾಗುವುದು. ಆದರೆ, ಇದಕ್ಕೂ ಮುನ್ನ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾದ ನೀಟ್ ಪರೀಕ್ಷೆಯ ಕೌನ್ಸೆಲಿಂಗ್ ಗಮನಿಸಿ ಸಿಇಟಿ ಕೌನ್ಸೆಲಿಂಗ್ ಏರ್ಪಡಿಸುತ್ತೇವೆ. ಕಾರಣ ಸಿಇಟಿ ಕೌನ್ಸೆಲಿಂಗ್ ನಲ್ಲಿ ಎಂಜಿನಿಯರಿಂಗ್ ಸೀಟು ಪಡೆದ ವಿದ್ಯಾರ್ಥಿಗಳು ಮೆಡಿಕಲ್ ಸೀಟ್ ಸಿಕ್ಕರೆ ಇಂಜಿನಿಯರಿಂಗ್ ರದ್ದು ಮಾಡಿ ಮೆಡಿಕಲ್ ಗೆ ತೆರಳುತ್ತಾರೆ. ಈ ಗೊಂದಲ ತಪ್ಪಿಸಲು ಅಗತ್ಯ ಮುಂಜಾಗ್ರತೆ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕರ್ನಾಟಕ ಟಿವಿ- ಬೆಂಗಳೂರು

- Advertisement -

Latest Posts

Don't Miss