‘ಕ್ರಿಕೆಟ್ ವಿಕೆಟ್’ ಪಾಲಿಟಿಕ್ಸ್‌ – ಎಲ್ಲವೂ ನೋಬಾಲ್ ಎಂದ ಖರ್ಗೆ!

ಆರ್. ಅಶೋಕ್ ಅವರ “ವಿಕೆಟ್ ಪತನ” ವಾರ್ತೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಕ್ರಿಕೆಟ್ ಶೈಲಿಯಲ್ಲಿಯೇ ಸಕ್ಕತ್ ಮಜವಾಗಿ ತಿರುಗೇಟು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ಬೌಲರ್‌ಗಳ ಬೌಲಿಂಗ್ ಲೈನ್-ಅಪ್ ಹೇಗಿದೆ ಅಂತಾ ನೋಡೋಣ ಬಿಡಿ ಅಂತಾ ವ್ಯಂಗ್ಯವಾಡಿದ್ದಾರೆ. ಬಿಜೆಪಿಯವರು ಎಸೆತಿರೋದೆಲ್ಲಾ ನೋಬಾಲ್ ಮತ್ತು ಫುಲ್ ಟಾಸ್ ಬಾಲ್‌ಗಳು, ಹಾಗಾಗಿ ಅಂಪೈರ್ ಯಾರೇ ಇದ್ದರೂ ವಿಕೆಟ್ ಬೀಳೋದು ಅವರದ್ದೇ ಹೊರತು ನಮ್ಮದಲ್ಲ ಅಂತಾ ಕೌಂಟರ್ ಕೊಟ್ಟಿದ್ದಾರೆ.

ಇನ್ನು ಅದರ ಜೊತೆಗೆ ‘ಕೆಪಿಎಸ್‌ಸಿ ಹಗರಣದಲ್ಲಿ ಸ್ವತಃ ಬಿಜೆಪಿ ಮುಖಂಡರೇ ಸಿಕ್ಕಾಕಿಕೊಳ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ ಅಂತಾ ಸಕತ್ ಟಾಂಗ್ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಂದಹಾಗೆ, ಹೊಸಪೇಟೆಯಲ್ಲಿ ಮಾತನಾಡಿದ್ದ ವಿಪಕ್ಷ ನಾಯಕ ಆರ್. ಅಶೋಕ್, ವಾಲ್ಮೀಕಿ ನಿಗಮದ ಹಗರಣದ ತರಹವೇ ಕೆಪಿಎಸ್‌ಸಿ ಹಗರಣದಲ್ಲೂ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಕ್ಕಾ ಅಂತಾ ಭವಿಷ್ಯ ನುಡಿದಿದ್ರು.

ಕೇವಲ ಒಬ್ಬ ಐಎಎಸ್ ಅಧಿಕಾರಿಯನ್ನು ಬಂಧಿಸಿದರೆ ಸಾಲದು, ಈ ನೇಮಕಾತಿ ದಂಧೆಯ ಮೂಲ ಮುಟ್ಟಿದ್ರೆ ಸರ್ಕಾರದ ಹಲವು ವಿಕೆಟ್‌ಗಳು ಉರುಳುತ್ತವೆ, ಅದರಲ್ಲಿ ಪ್ರಿಯಾಂಕ್ ಖರ್ಗೆ ಅವರ ವಿಕೆಟ್ ಮೊದಲು ಬೀಳುತ್ತೆ ಅಂತಾ ಗುಡುಗಿದ್ರು. ಇದೇ ವೇಳೆ, ಬಸವರಾಜ ರಾಯರೆಡ್ಡಿ ಅವರ ಇಸ್ಲಾಂ ಧರ್ಮದ ಪರ ಹೇಳಿಕೆಯನ್ನು ಖಂಡಿಸಿ, ರಾಯರೆಡ್ಡಿ ಸಚಿವ ಸಂಪುಟದಲ್ಲಿ ಮುಂದುವರಿಯಲು ಅರ್ಹರಲ್ಲ ಅಂತಾ ಅಶೋಕ್ ಆಗ್ರಹಿಸಿದ್ದರು. ಜೊತೆಗೆ, ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ, ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಎನ್ ಡಿಎ ಒಗ್ಗಟ್ಟಾಗಿಯೇ ಇದೆ ಅಂತಲೂ ಸಹ ಸ್ಪಷ್ಟಪಡಿಸಿದ್ದರು.

ಅದರ ಬೆನ್ನಲ್ಲೇ ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಹ, ಬಿಜೆಪಿ ಬೌಲರ್ ಗಳು ಹೇಗಿದ್ದಾರೆ ನೋಡೋಣ. ಈಗಾಗಲೇ ಕೆಪಿಎಸ್ಸಿ ಹಗರಣದಲ್ಲಿ ಬಿಜೆಪಿ ಮುಖಂಡರೆ ಸಿಕ್ಕಿ ಹಾಕಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ತಿರುಗೇಟು ಕೊಟ್ಟಿದ್ದಾರೆ. ಒಟ್ಟಿನಲ್ಲಿ ಹೇಳೋದಾದ್ರೆ ‘ಆರ್. ಅಶೋಕ್ ಅವರ ‘ಕ್ರಿಕೆಟ್ ವಿಕೆಟ್’ ಪಾಲಿಟಿಕ್ಸ್‌ಗೆ, ಪ್ರಿಯಾಂಕ್ ಖರ್ಗೆ ಅವರು ‘ನೋಬಾಲ್-ಫುಲ್ ಟಾಸ್’ ಕೌಂಟರ್ ಕೊಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಈಗ ಮತ್ತೊಂದು ರೌಂಡ್ ವಾಗ್ದಾಳಿ ನಡೆಸಿದ್ದಾರೆ ಅಂತಾನೆ ಹೇಳಬಹುದು.

About The Author