ಕಲಬುರಗಿ: ಜಿಲ್ಲೆಯ ಜೇವರ್ಗಿ ಮತ್ತುಯಡ್ರಾಮಿ ತಾಲೂಕುಗಳಲ್ಲಿ ಕುಡಿಯುವ ನೀರಿನ್ನು ಜನರಿಗೆ ತಲಿಪಿಸುವಲ್ಲಿ ಆಗಿರುವ ತೊಂದರೆಯನ್ನು ನಿರ್ವಹಣೆ ಮಾಡಲು ತುರ್ತು 1 ಕೋಟಿ ರೂ ಗಳನ್ನು ಜಿಲ್ಲಾ ಉಸ್ತುವಾರಿಗಳು ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದ್ದಾರೆ.
ಯಡ್ರಾಮಿ ಮತ್ತು ಜೇವರ್ಗಿ ತಾಲೂಕುಗಳಿಗೆ ತಲಾ ಒಂದೊಂದು ಗ್ರಾಮಗಳಿಗೆ ಒಂದರಂತೆ ಟ್ಯಾಂಕ್ ಗಳ ಮೂಲಕ ನೀರು ಪೂರೈಕೆ ಮಾಡಿ ನೀರಿನ ಸಮಸ್ಯೆಯನ್ನು ನಿವಾರಿಸಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮಗಳ ಮೌಲ್ಯಮಾಪನ ಮಾಡಿದ್ದು ಕ್ರಿಯಾ ಯೋಜನೆ ರಚಿಸಲಾಗಿದೆ. 2.6 ಕೋಟಿ ವೆಚ್ಚದಲ್ಲಿ 130 ಕಾಮಗಾರಿಗಳಿಗೆ ಪ್ರಸ್ಥಾವನೆ ಹೊರಡಿಸಲಾಗಿದೆ.
200 ಶುದ್ದ ನೀರಿನ ಘಟಕಗಳು ದುರಸ್ತಿಗೆ ಒಳಗಾಗಿದ್ದೂ ಇವುಗಳನ್ನು ಸರಿಪಡಿಸಿ ನೀರು ಸರಬರಾಜಿಗೆ ಅನುಕೂಲ ಮಾಡಲಾಗುವುದು ಎಂದು ಸೂಚಿಸಲಾಗಿದೆ.ಮೇ ಜೂನ್ ತಿಂಗಳಲ್ಲಿ 7 ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗಿದೆ ಎಂದು ಹೇಳಿದರು