ಪ್ರಿಯಾಂಕಾ ಪಾತ್ರೆ ಸ್ವಚ್ಛ ಮಾಡಿದಾಗ ಸುದ್ದಿಯಾಯಿತು, ನಾನು ಕಸ ಗುಡಿಸಿದಾಗ ಅಣಕವಾಯಿತು: ಜಗ್ಗೇಶ್ ಬೇಸರ..!

Sandalwood News: ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಪಂಜಾಬ್‌ನ ಸ್ವರ್ಣಮಂದಿರದಲ್ಲಿ ಭಕ್ತರು ಪ್ರಸಾದ ಸೇವಿಸಿದ ಪ್ಲೇಟ್-ಲೋಟ ವಾಶ್ ಮಾಡಿದ್ದರ ಬಗ್ಗೆ ಸುದ್ದಿಯಾಗುತ್ತಿದೆ. ಈ ವಿಷಯವನ್ನು ನಟ ಜಗ್ಗೇಶ್ ಪ್ರಸ್ತಾಪಿಸಿ, ಪ್ರಿಯಾಂಕಾ ಛೋಪ್ರಾ ಪಾತ್ರೆ ವಾಶ್ ಮಾಡಿದಾಗ ಭೇಷ್ ಎಂದವರು, ನಾನು ದೇವಸ್ಥಾನದಲ್ಲಿ ಕಸ ಗುಡಿಸಿದ್ದಕ್ಕಾಗಿ ಹೀಯಾಳಿಸಿದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದಿರುವ ಅವರು, ಪ್ರಿಯಾಂಕ ಚೋಪ್ರ ಶ್ರೀಮಂತೆ ನಟಿ, ಆದರು ಆಲಯದಲ್ಲಿ ತಟ್ಟೆತೊಳೆದಳು ಎಂದಾಗ ದೊಡ್ಡ ಸುದ್ಧಿ ಆಯಿತು..! ಜಗ್ಗೇಶ ರಾಯರ ಮಠದಲ್ಲಿ ಕಸಗುಡಿಸಿದ ಎಂದಾಗ ಜಾಲತಾಣದಲ್ಲಿ ಅಣಕವಾಯಿತು..!

ವಿಷಯ ಅದಲ್ಲ, ಯಾರೆ ಮನುಷ್ಯನಾಗಲಿ ಸೇವಕನಂತೆ ಬಾಳಿದರೆ ದೇವರಿಗೆ ಪ್ರಿಯವಾಗಿ ಗ್ರಹ ದೋಷ ನಿವೃತ್ತಿಯಾಗುತ್ತದೆ!! ನಮ್ಮ ಅಮ್ಮ ಕಲಿಸಿದ ಈ ಪಾಠ ನಾನು ಇಂದು ಪಾಲಿಸಿ ದೇವರ ಕೃಪೆಯಿಂದ ನನ್ನ ಬದುಕು ಶ್ರೀರಾಮಪುರ ಪುಟ್ಪಾತಿನಿಂದ ಶುರುವಾಗಿ ಇಲ್ಲಿಯವರೆಗೂ ತಂದು ನಿಲ್ಲಿಸಿದೆ.. ಧನ್ಯೋಸ್ಮಿ
ಉದಾಹರಣೆಗೆ, ನನ್ನ ಗ್ರಹಸ್ಥಿತಿ ಈಗ 5 ರಲ್ಲಿ ಶನಿ 8 ರಲ್ಲಿ ಗುರು ಗ್ರಹ ಇದೆ. ಜೋತಿಷ್ಯ ಅರಿತವನಾಗಿ ನನಗೆ ಅರಿವಿತ್ತು, ಕಡ್ಡಾಯ ವಾಹನ ಅಪಘಾತ ಆಗುತ್ತದೆ ಅಥವಾ ಅನಾವಷ್ಯಕ ತೊಂದರೆ ಆಗುತ್ತದೆ, ಅದಕ್ಕಾಗಿ ದೋಷ ನಿವೃತ್ತಿಗೆ ಆಲಯ ಗುಡಿಸುವ ಸೇವೆ ಮಾಡಬೇಕೆಂದು, ಇದೇ ಶ್ರೇಷ್ಠ ಪರಿಹಾರ ಎಂದು ರಾಯರ ಮಠದ ಕಸಗುಡಿಸುವ ಸೇವೆ ಮಾಡುವೆ.
ಆಶ್ಚರ್ಯ ಪಡುವಂತೆ ನನಗೆ 2 ಅಪಘಾತವಾಯಿತು. ಒಂದು ದೆಹಲಿಯಲ್ಲಿ ನಾನು ಚಲಿಸುತ್ತಿದ್ದ ಕಾರಿಗೆ ಮುಂದಿನ ಕಾರು ಏಕಾಏಕಿ ಬ್ರೇಕ್ ಹಾಕಿ ನಮ್ಮ ಕಾರು ಅದಕ್ಕೆ ಗುದ್ದಿ ಹಿಂದಿನ ಕಾರುಗಳು ನಮಗೆ ಗುದ್ದಿ ಘೋರ ಅಪಘಾತವಾಯಿತು. ಒಳಗಿದ್ದ ನನಗೂ, ನನ್ನ PA ಗೂ ಸಣ್ಣ ಗಾಯವು ಇಲ್ಲ, ಗಾಡಿ ಮಾತ್ರ ಜಕಮ್!
2ನೇ ಅಪಘಾತ, ನಿಂತ ನನ್ನ ಗಾಡಿಗೆ ಚಾಲಕ ಅಚಾತುರ್ಯಕ್ಕೆ ಮರಕ್ಕೆ ಅಪ್ಪಳಿಸಿ ಲಕ್ಷ ರೂ ಖರ್ಚಾಯಿತು ರಿಪೇರಿಗೆ!
ನನಗೆ ಯಾವ ತೊಂದರೆ ಆಗಲಿಲ್ಲಾ, ಈಗ ಹೇಳಿ ಇದು ಕಾಕತಾಳಿನಾ? ದೇವರ ಸೇವೆಯ ಮಹತ್ವ ಆಪತ್ತಿನ ಸಮಯದಲ್ಲಿ ಅರಿಯ ಬೇಕು. ಯಾರೇ ಆಗಲಿ ದೇವರ ನಂಬಿಕೆ ಇದ್ದವರ ಸೇವೆಯ ಕಾರಣ ಅರಿಯಬೇಕೆ ಹೊರತು, ಅವರ ಕಾರ್ಯ(ವಿಶೇಷವಾಗಿ ಸೆಲಿಬ್ರಿಟಿಗಳ ವೈಯಕ್ತಿಕ ವಿಷಯ) ಕದ್ದು ಚಿತ್ರೀಕರಿಸಿ ಜಾಲತಾಣಕ್ಕೆ ಹಾಕಿ ಬರುವ ಕೆಟ್ಟ ಸಂದೇಶ ನೋಡಿ ವಿಕೃತ ಆನಂದ ಚರ್ಚೆ ಮಾಡಬಾರದು!!
ಅಣಕ, ಅಪಹಾಸ್ಯ, ದೇವರ ಸೇವೆ ಮಾಡುವ ಮನುಷ್ಯನಿಗೆ ಮಾಡಿದಾಗ ಅವನ ದೋಷ ಅಣಕ ಮಾಡಿದವನಿಗೆ ಸುತ್ತಿಕೊಂಡು ಅವನ ಯಶಸ್ಸು ಕುಂಟಿತವಾಗುತ್ತದೆ (ಭಾಗವತದಲ್ಲಿ ಇದರ ಉಲ್ಲೇಖವಿದೆ).
ಜಗತ್ತು ಎಷ್ಟೇ ಆಧುನಿಕತೆ ಆದರು ದೇವರ ಕೃಪೆ ಹಾಗು ಗುರು ಹಿರಿಯರ ಆಶೀರ್ವಾದ ಪ್ರತಿ ಮನುಷ್ಯನಿಗೆ ಇಂದು ಮುಂದು ಎಂದೆಂದೂ ಬೇಕೇ ಬೇಕು ಎಂಬುದು ನನ್ನ ಅನುಭವದ ಅನಿಸಿಕೆ. ಸದಾ ನಿಮ್ಮ ಒಳಿತು ಬಯಸುವ ನಿಮ್ಮವನೆ ನಾನು. ನನಗೆ ತಿಳಿದದ್ದು ನಿಮಗೆ ತಿಳಿಸುವೆ. ಇಷ್ಟಪಟ್ಟವರು ಕೇಳಿ ಇಷ್ಟವಾಗದವರು ಏನೋ ನಮ್ಮ ಜಗ್ಗೇಶ ಬರೆದವನೆ ಎಂದು ನಕ್ಕು ಸುಮ್ಮನಾಗಿ. ಈ ರೀತಿಯಾಗಿ ಜಗ್ಗೇಶ್ ಅವರು ತಮ್ಮ ಅನುಭವ ಮತ್ತು ಅಭಿಪ್ರಾಯ ವ್‌ಯಕ್ತಪಡಿಸಿದ್ದಾರೆ.
https://karnatakatv.net/bollywood-bollywood-actress-priyanka-chopra-washed-the-plates-and-bowls-eaten-by-devotees/

About The Author