Wednesday, April 16, 2025

Latest Posts

ಆರೋಪಿಗಳನ್ನ ಪತ್ತೆ ಹಚ್ಚಿದವರಿಗೆ ಲಕ್ಷ ಲಕ್ಷ ಬಹುಮಾನ..!

- Advertisement -

State news :

ಬಿಜೆಪಿ ಯುವ ಮುಖಂಡ ಪ್ರವೀಣ್ ‌ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿರುವ ಮತ್ತಿಬ್ಬರು‌ ಆರೋಪಿಗಳ ಪತ್ತೆಗೆ ರಾಷ್ಟ್ರೀಯ ತನಿಖಾ ದಳ ಮುಂದಾಗಿದ್ದು ಆರೋಪಿಗಳ ಕುರಿತು ಸುಳಿವು ನೀಡಿದವರಿಗೆ ಐದು ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ. ನಿಷೇಧಿತ ಪಿಎಫ್ಐ ಸಂಘಟನೆ ಕಾರ್ಯಕಾರಿ ಸಮಿತಿ ಸದಸ್ಯ ಬಂಟ್ವಾಳ ತಾಲೂಕಿನ ಕೊಡಾಜೆಯ ಮಹಮ್ಮದ್ ಶರೀಪ್ (48) ಹಾಗೂ ನೆಕ್ಕಿಲಾಡಿಯ ಮಸೂದ್ ಪತ್ತೆಗೆ ಎನ್ಐಎ 5ಲಕ್ಷ ರೂ ಬಹುಮಾನ ಘೋಷಣೆ ಮಾಡಿದೆ.ಸುಳಿವು ನೀಡಿದವರ ಮಾಹಿತಿ ಗೌಪ್ಯವಾಗಿ ಇಡೋದಾಗಿ ರಾಷ್ಟ್ರೀಯ ತನಿಖಾ ದಳ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಈ ಹಿಂದೆ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ್ದ ನಾಲ್ವರು ಅರೋಪಿಗಳ ಸುಳಿವು ನೀಡಿದವರಿಗೆ ಎನ್‌ಐಎ ಒಟ್ಟು 14 ಲಕ್ಷ ನಗದು ಬಹುಮಾನ ಘೋಷಣೆ ಮಾಡಿತ್ತು. ಮೊಹಮ್ಮದ್ ಮುಸ್ತಫಾಗೆ 5 ಲಕ್ಷ, ತುಫೈಲ್ ಗೆ 5 ಲಕ್ಷ, ಉಮರ್ ಫಾರೂಕ್ ಗೆ 2 ಲಕ್ಷ, ಅಬುಬಕರ್ ಸಿದ್ದಿಕ್ ಗೆ 2 ಲಕ್ಷ ಘೋಷಿಸಿತ್ತು.

ದ.ಕ ಜಿಲ್ಲೆ ಸುಳ್ಯ ತಾಲ್ಲೂಕು ಬೆಳ್ಳಾರೆ ಬೂಡುಮನೆ ನಿವಾಸಿ ಮೊಹಮ್ಮದ್ ಮುಸ್ತಫಾ. ಕೊಡಗು ಜಿಲ್ಲೆ ಮಡಿಕೇರಿ ನಗರದ ಗದ್ದಿಗೆ ನಿವಾಸಿ ತುಫೈಲ್ ಎಂ ಹೆಚ್. ದ.ಕ ಜಿಲ್ಲೆ ಸುಳ್ಯ ನಗರದ ಕಲ್ಲುಮುಟ್ಲು ನಿವಾಸಿ ಉಮ್ಮರ್ ಫಾರೂಕ್. ದ.ಕ ಜಿಲ್ಲೆ‌ ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಆರೋಪಿಗಳಾಗಿದ್ದು ನಾಲ್ವರು ನಿಷೇಧಿತ ಪಿಎಫ್ ಐ ಕಾರ್ಯಕರ್ತರಾಗಿದ್ದಾರೆ. ಜುಲೈ 26 ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು.

 

ಕರ್ತವ್ಯ ನಿರತ ಸರ್ಕಲ್ ಇನ್ ಪೆಕ್ಟರ್ ಮೇಲೆ ಹಲ್ಲೆ..!

ಮೆಟ್ರೋ ಪಿಲ್ಲರ್ ದುರಂತ,15 ಅಧಿಕಾರಿಗಳಿಗೆ ನೋಟೀಸ್..!

PSI ಕಿಂಗ್ ಪಿನ್ ಮನೆ ಮೇಲೆ ದಾಳಿ..!

- Advertisement -

Latest Posts

Don't Miss