ರೊಟ್ಟರ್‍ಡ್ಯಾಮ್: ಮತ್ತೊಮ್ಮೆ ವೈಫಲ್ಯ ಅನುಭವಿಸಿದ ಭಾರತ ಪುರುಷರ ಹಾಕಿ ತಂಡ ಬಲಿಷ್ಠ ನೆದರ್‍ಲ್ಯಾಂಡ್ ವಿರುದ್ಧ 1-2 ಗೋಲುಗಳಿಂದ ಸೋಲು ಕಂಡಿದೆ.
ಈಗಗಲೇ ಪ್ರಶಸ್ತಿ ಸುತ್ತಿನಿಂದ ಹೊರಬಿದಿದ್ದ ಭಾರತ ಎರಡನೆ ಪಂದ್ಯದಲ್ಲೂ ಸೋಲು ಕಂಡಿತು. ಮೊದಲ ಕ್ವಾರ್ಟರ್‍ನಲ್ಲಿ ಎರಡೂ ತಂಡಗಳು 1-1 ಸಮಾನ ಗೊಳು ಗಳಿಸಿದವು.
ಮೂರನೆ ಕ್ವಾರ್ಟರ್‍ನಲ್ಲಿ ನೆದರ್ ಲ್ಯಾಂಡ್ ತಂಡದ ಕ್ರೂನ್ ಗೋಲು ಹೊಡೆದು ತಂಡಕ್ಕೆ ಮುನ್ನಡೆ ನೀಡಿದರು. ನಾಲ್ಕನೆ ಕ್ವಾರ್ಟರ್‍ನಲ್ಲಿ ಭಾರತ ಗೋಲು ಹೊಡೆಯಲು ಪ್ರಯತ್ನಿಸಿತ್ತಾದರೂ ಸಫಲವಾಗಲಿಲ್ಲ.
ಭಾರತ ವನಿತೆಯರಿಗೂ ಸೋಲು
ದಿಟ್ಟ ಪ್ರದರ್ಶನ ನೀಡಿದ ಹೊರತಾಗಿಯೂ ಭಾರತ ವನಿತೆಯರ ಹಾಕಿ ತಂಡ ಎಐಎಚ್ ಪ್ರೊಹಾಕಿ ಲೀಗ್‍ನಲ್ಲಿ ಬಲಿಷ್ಠ ಅರ್ಜೆಂಟಿನಾ ವಿರುದ್ಧ 2-3 ಗೋಲುಗಳ ಅಂತರದಿಂದ ಸೋಲು ಕಂಡಿದೆ. ಅರ್ಜೆಂಟಿನಾ 16 ಪಂದ್ಯಗಳಿಂದ 42 ಅಂಕಗಳನ್ನ ಸಂಪಾದಿಸುವ ಮೂಲಕ ಎಐಎಚ್ ಪ್ರೊ ಹಾಕಿ ಲೀಗ್‍ನ ಚಾಂಪಿಯನ್ನಾಗಿ ಹೊರ ಹೊಮ್ಮಿದೆ. ಭಾರತ ವನಿತೆಯರ ತಂಡ 12 ಪಂದ್ಯಗಳಿಂದ 24 ಅಂಕಗಳನ್ನು ಪಡೆದಿದೆ.