Tuesday, April 15, 2025

Latest Posts

ನಟಿ ಸಂಜನಾ ಗಲ್ರಾನಿ‌ ಮನೆಗೆ ಭೇಟಿ ಕೊಟ್ಟ ನಿರ್ಮಾಪಕ ಕೆ.ಮಂಜು…!

- Advertisement -

ಡ್ರಗ್ಸ್ ಪ್ರಕರಣದಡಿ ಜೈಲು ಹಕ್ಕಿಯಾಗಿದ್ದ ನಟಿ ಸಂಜನಾ ಗಲ್ರಾನಿ ಜಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಜೈಲಿನಿಂದ ಹೊರ ಬಂದ ಬಳಿಕ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಸಂಜನಾ, ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿರುವ ಫೋಟೋ ಶೇರ್ ಮಾಡಿದ್ದರು. ಇದೀಗ ನಿರ್ಮಾಪಕ‌ ಕೆ.ಮಂಜು ಸಂಜನಾ ಮನೆಗೆ ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿದ್ದಾರೆ.

ಸಂಜನಾ ಕುಟುಂಬದ ಜೊತೆ ಕುಳಿತು ಭೋಜನ ಸವಿಯುತ್ತಿರುವ ಕೆ. ಮಂಜು ಫೋಟೋವನ್ನು ಹಂಚಿಕೊಂಡಿರುವ ಸಂಜನಾ, ಕೆ.ಮಂಜು ಅಣ್ಣ ಮನೆಗೆ ಭೇಟಿ‌ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಧನ್ಯವಾದ ಅಣ್ಣ ನಿಮ್ಮ ಭೇಟಿಗೆ ಎಂದು ಪೋಸ್ಟ್ ಹಾಕಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದ ಸಂಜನಾ, ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದರು.

- Advertisement -

Latest Posts

Don't Miss