ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಈಗ ಭಕ್ತಸಾಗರ. ಆಷಾಢ ಮಾಸದ ಪ್ರಯುಕ್ತ ನಾಡದೇವಿಗೆ ವಿಶೇಷ ಪೂಜೆಗಳು ಜೋರಾಗಿದೆ. ಆಷಾಢದ ಮೊದಲ ಶುಕ್ರವಾರ, ಶನಿವಾರ, ಭಾನುವಾರ ಸೇರಿ ಮೂರು ದಿನಗಳಲ್ಲಿ ಸುಮಾರು ಒಂದೂವರೆ ಲಕ್ಷ ಭಕ್ತರು ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 1336 ಟ್ರಿಪ್‌ಗಳನ್ನು ಮಾಡಲಾಗಿದ್ದು, ಇದರಿಂದ ಸಾರಿಗೆ ಸಂಸ್ಥೆಗೆ ಬರೋಬ್ಬರಿ 25 ಲಕ್ಷ ರೂಪಾಯಿ ಆದಾಯ ಬಂದಿದೆ.
ಈ ಬಾರಿ ವಿಶೇಷವಾಗಿ ಉಚಿತ ಬಸ್‌ಗಳು, ವೋಲ್ವೊ ಬಸ್‌ಗಳು ಹಾಗೂ ನಗರ ಬಸ್ ನಿಲ್ದಾಣದಿಂದ ವಿಶೇಷ ಸೇವೆ ಒದಗಿಸಲಾಗಿತ್ತು. ಮೂರು ಕೆಎಸ್‌ಆರ್‌ಟಿಸಿಗೆ 25 ಲಕ್ಷ ರೂ. ಆದಾಯ ಸಂಗ್ರಹವಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಆಷಾಡ ಶುಕ್ರವಾರ ಉಚಿತ ಸಾಮಾನ್ಯ ಬಸ್‌ಗಳು 310 ಟ್ರಿಪ್ ಆಗಿದೆ. 2000 ಟಿಕೆಟ್ ಪಡೆದವರು ಪ್ರಯಾಣಿಸಿದ ವೋಲ್ವೊ ಬಸ್‌ಗಳ 63 ಟ್ರಿಪ್ ಮತ್ತು ಸಿಟಿ ಬಸ್ ನಿಲ್ದಾಣದಿಂದ 207 ಸೇರಿದಂತೆ ಒಟ್ಟು 580 ಟ್ರಿಪ್ ಆಗಿದೆ ಎಂದು ಕೆಎಸ್ ಆರ್‌ಟಿಸಿ ನಗರ ವಿಭಾಗೀಯ ನಿಯಂತ್ರಣಾಕಾರಿಯಾಗಿರುವ ವೀರೇಶ್ ಅವರು ಮಾಹಿತಿ ನೀಡಿದ್ದಾರೆ.
ಕಳೆದ ಶನಿವಾರ, ಭಾನುವಾರದಂದು 228 ಟ್ರಿಪ್‌ನಲ್ಲಿ ಜನರು ಲಲಿತಮಹಲ್ ಹೆಲಿಪ್ಯಾಡ್ ಬಳಿಯಿಂದ ಟಿಕೆಟ್ ಪಡೆದು ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ಅಲ್ಲದೇ 300 ರೂ. ಟಿಕೆಟ್‌ನ 191 ಟ್ರಿಪ್ ಆಗಿದೆ ಮತ್ತು 2000 ರೂ. ಟಿಕೆಟ್ ಪಡೆದವರು ವೋಲ್ವೊ ಬಸ್‌ನಲ್ಲಿ 23 ಟ್ರಿಪ್ ಬಳಕೆ ಮಾಡಿಕೊಂಡಿದ್ದಾರೆ. ನಗರ ಬಸ್ ನಿಲ್ದಾಣದಿಂದ ಒಟ್ಟು 334 ಟ್ರಿಪ್‌ನಲ್ಲಿ ಬೆಟ್ಟಕ್ಕೆ ತೆರಳಿದ್ದಾರೆ. 14 ವೋಲ್ವೊ ಸೇರಿದಂತೆ ಒಟ್ಟು 194 ಬಸ್ ಬಳಕೆಯಾಗಿದೆ. ಒಟ್ಟು ಮೂರು ದಿನಗಳಲ್ಲಿ ಅಂದಾಜು ಒಂದೂವರೆ ಲಕ್ಷ ಮಂದಿ ಚಾಮುಂಡೇಶ್ವರಿ ಬೆಟ್ಟದ ಆಷಾಢ ಮಾಸ ಆಚರಣೆಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್ ಬಳಕೆ ಮಾಡಿಕೊಂಡಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ