Sunday, September 8, 2024

Latest Posts

ಅನ್ಯದೇಶದಲ್ಲಿ ಮೋಸಹೋದ ಭಾರತಿಯರಿಗೆ ಕನ್ನಡಿಗರಿಂದ ರಕ್ಷಣೆ

- Advertisement -

www.karnatakatv.net : ಅನ್ಯ ದೇಶದಲ್ಲಿ ಸಂಕಷ್ಟಕ್ಕೊಳಗಾದ ಭಾರತಿಯರನ್ನು, ಕನ್ನಡಿಗರೊಬ್ಬರು ಸುರಕ್ಷಿತವಾಗಿ ರಕ್ಷಣೆ ಮಾಡಿ ಭಾರತಕ್ಕೆ ಮರಳಿ ಕಳುಹಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮೋಸಕ್ಕೊಳಗಾಗುವ ಅಮಾಯಕರಿಗೆ ಮಾನವಿಯ ನೆರವು ನೀಡಿದ್ದಾರೆ. ಹಣಗಳಿಸುವ ಅಬ್ಬರದಲ್ಲಿ ಭಾರತೀಯರು ಮೋಸ ಹೋಗಿ ಉದ್ಯೋಗವಿಲ್ಲದೆ, ತಮ್ಮ ತವರಿಗೂ ಹೋಗಲಾಗದ ಸಂಕಷ್ಟ ಬರುವುದು ಸಾಮಾನ್ಯ ವಾಗಿದೆ , ಇನ್ನೂ ಕೇಲವರು ದುಬಾರಿ ಹಣ ಕಟ್ಟಲು ಆಗದೆ ಜೈಲಿನಲ್ಲಿ ಕಾಲ ಕಳೆಯುವ ಪರಸ್ಥಿತಿಯು ಬಂದಿದೆ. ಹಾಗೆ ಪಾಸ್ ಪೋರ್ಟ್ ಕಳೆದು ಕೋಂಡು ಬಿದಿ ಬಿದಿ ಅಲೆದವರು ಇದ್ದಾರೆ. ದುಬೈನಲ್ಲಿ ಅಂತವರನ್ನು ಗುರುತಿಸಿ ಅವರನ್ನು ಮರಳಿ ತವರಿಗೆ ಕಳಿಸುವ ಕೆಲಸವನ್ನು ನಮ್ಮ ಭಟ್ಕಳ ತಾಲೂಕಿನ  ಮೂಲದ ಏಮ್ ಇಂಡಿಯಾ ಫೋರಂ ಅಧ್ಯಕ್ಷರಾದ ಶೇಖ್ ಮುಜಫರ್ ಶಿರಾಲಿ ಅವರು ಮಾಡುತ್ತಿದ್ದಾರೆ. ಅದಲ್ಲದೆ ಇವರಿಗೆ ಇನ್ನೋಬ್ಬ ಕನ್ನಡಿಗ ಯಾಸೀರ್ ಅರಾಘತ್ ಮಕಾನದಾರ ಅವರು ಕೂಡಾ ಸಹಾಯವನ್ನು ಮಾಡುತ್ತಿದ್ದಾರೆ.

ಸಂಕಷ್ಟಕ್ಕೆ ಒಳಗಾದ ಭಾರತಿತಯರ ಬಗ್ಗೆ ಮಾಹಿತಿ ಸಿಕ್ಕ  ನಂತರ ಏಮ್ ಇಂಡಿಯಾ ಪೋರಂ, ದುಬೈನಲ್ಲಿರುವ ಭಾರತೀಯ ದೂತಾವಾಸ ಕಚೇರಿಗೆ ಸಂಪರ್ಕಿಸುತ್ತದೆ. ತದನಂತರ ರಾಯಭಾರ ಕಚೇರಿಯ ಜನರಲ್ ಡೈರೆಕ್ಟರೇಟ್ ಆಫ್ ರೆಸಿಡೆನ್ಸಿ ಆ್ಯಂಡ್ ಫಾರಿನ್ ಆಫೇರ್ಸ್ ಅನ್ನು ಸಂಪರ್ಕಿಸಿ ದುಬೈ ಸರ್ಕಾರ ವಿಧಿಸಿದ ದಂಡವನ್ನು ಮನ್ನಾ ಮಾಡಿಸುತ್ತದೆ. ಹಾಗೂ ಉಚಿತ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿಸಿ ಭಾರತಕ್ಕೆ ಕಳುಹಿಸುವ ಕೆಲಸವನ್ನು ಮಾಡುತ್ತದೆ.

ಇಷ್ಟೇ ಅಲ್ಲದೆ ಪಾಸ್ ಪೋರ್ಟ್ ಕಳೆದು ಕೊಂಡ ಪಂಜಾಬ್ ಮಹಿಳೆಯನ್ನು ಸಹ ಮರಳಿ ಭಾರತಕ್ಕೆ ಕಳುಹಿಸಿದ್ದಾರೆ, ಪಂಜಾಬ್ ಮೂಲದ ಅಮೃತಸರದ  ಸುಮನ್ ಬಾಲ ಎಂಬುವವರು ಮನೆ ಕೆಲಸಕ್ಕೆಂದು ದುಬೈಗೆ ತೆರಳಿದ್ದರು, ಆಗ ಆಕೆಯನ್ನು ಕರೆದುಕೊಂಡ ಹೋದ ಮಹಿಳಾ ಎಜೆಂಟ್ ಪಾಸ್ ಪೋರ್ಟ್ ಕಸಿದು ಕೊಂಡು ಮೋಸಮಾಡಿದ್ದರು ಆಗ ಪಾಸ್ ಪೋರ್ಟ್ ಇಲ್ಲದೆ ಬಿದಿ ಬಿದಿ ಅಲೆದಾಡುವಾಗ ಏಮ್ ಇಂಡಿಯಾ ಪೋರಂಗೆ ಪರಿಚಯವಾಗಿ ನಂತರ ಅವರಿಗೆ ಪಾಸ್ ಪೋರ್ಟ್ ಮಾಡಿಸಿ ಮರಳಿ ಭಾರತಕ್ಕೆ ಕಳುಹಿಸಿದ್ದಾರೆ

ಸಂಕಷ್ಟದಲ್ಲಿರುವ ಈ ಭಾರತೀಯ ಪ್ರಜೆಯ ಸಂರಕ್ಷಣೆ ಮತ್ತು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಏಮ್ ಇಂಡಿಯಾ ಫೋರಂ ಪರವಾಗಿ ಶೇಖ್ ಮುಜಫರ್ ಶಿರಾಲಿ ಅವರು ಈಗಾಗಲೇ ಪ್ರಧಾನ ಮಂತ್ರಿ ಸೇರಿದಂತೆ ಸಂಬಂಧಿಸಿದ ಇಲಾಖೆ ಮತ್ತು ಅಧಿಕಾರಿ ವಲಯಕ್ಕೆ ವಿಶೇಷ ಮನವಿಯ ಮೂಲಕ ಪ್ರಯತ್ನಿಸುತಿದ್ದು,ಭಾರತ ಮತ್ತು ಇರಾನ್ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.ಇವರ ಪ್ರಯತ್ನದ ಫಲವಾಗಿ ಯಾಸೀನಶಾ ಇವರ ಪಾಸಪೋರ್ಟ ಆತನ ಇರಾನ್ ಮಾಲೀಕರಿಂದ ಮರಳಿ ಪಡೆಯಲಾಗಿದ್ದು, ಇಂದಿನಿಂದ ನಿಯಮಿತ ಆಹಾರವನ್ನು ಸಹ ಪುರೈಸಲಾಗುತ್ತಿದೆ.ಇವರ ಮಾಲೀಕರಿಂದ ವೇತನ ಪಾವತಿಯ ಜೊತೆಗೆ ಭಾರತಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಡುವ ಕುರಿತು ಏಮ್ ಇಂಡಿಯಾ ಫೋರಂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಸಾಧಿಸಿದ್ದು,ಪ್ರಕರಣ ಆದಷ್ಟು ಬೇಗ ಸುಖಾಂತ ಕಾಣುವ ವಿಶ್ವಾಸವಿದೆ. ಏಮ್ ಇಂಡಿಯಾ ಫೋರಂ ಮತ್ತು ಭಟ್ಕಳ ಸಮುದಾಯದವರ ಪ್ರಯತ್ನ ಆದಷ್ಟು ಬೇಗ ಯಶಸ್ವಿ ಆಗಲೆಂಬ ಹಾರೈಕೆ.

- Advertisement -

Latest Posts

Don't Miss