Saturday, April 19, 2025

Latest Posts

ತಹಶೀಲ್ದಾರ್ ಕಚೇರಿಯಲ್ಲಿ ಪ್ರತಿಭಟನೆ…!

- Advertisement -

www.karnatakatv.net :ಚಾಮರಾಜನರ: ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿಯಲ್ಲಿ ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಅಸಾಮಾಧಾನವುಂಟಾಗಿ ಕಡೆಗೆ ಪ್ರತಿಭಟನೆ ನಡೆದ ಪ್ರಸಂಗ ಎದುರಾಯ್ತು

ಪಟ್ಟಣದ  ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ರವಿಶಂಕರ್ ರವರ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ  ಪ್ರತಿಭಟ ನೆ ಚರ್ಚೆ ಧಿಕ್ಕಾರಗಳ ನಡುವೆ ಸಭೆಯು ಪ್ರಾರಂಭವಾಯಿತು.ಈ ವೇಳೆ ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಅಧ್ಯಕ್ಷ ಆರ್ ಸೋಮಣ್ಣ ಮಾತನಾಡಿ ತಾಲ್ಲೂಕಿನಲ್ಲಿ ಕೋವಿಡ್ ನಿಯಮಗಳನ್ನು ಮೀರಿ ಹಲವಾರು ಕಾರ್ಯ ಕ್ರಮಗಳು ನಡೆಯುತ್ತಿವೆ. ಈ ಕಾರ್ಯಕ್ರಮಗಳಿಗೆ ಯಾವುದೇ ನಿಯಮ ಇಲ್ಲ. ಆದರೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆ ಕರೆಯಲು ಮಾತ್ರ ಕೋವಿಡ್ ಅಡ್ಡಿ ಇದೆಯೆ ಎಂದು ಪ್ರಶ್ನಿಸಿದ್ರು.

3 ತಿಂಗಳಿಗೊಮ್ಮೆ ಸಭೆ ಕರೆಯಬೇಕು ಎಂಬ ಕಾನೂನು ಇದೆ. ಸಭೆ ನಡೆಯುತ್ತದೆ ಅಷ್ಟೇ ಅದರ ಅನುಪಾಲನಾ ವರದಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಲುಪುತ್ತಿದೆಯೋ ಏನೋ ಗೊತ್ತಿಲ್ಲ. ಇನ್ನೂ ಸಭೆಗೆ ಸಮಾಜ ಕಲ್ಯಾಣ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡುತ್ತಿಲ್ಲ ಕಾಟಚಾರದ ಸಭೆ ಮಾಡಬೇಡಿ ಇದಕ್ಕೆ ನಮ್ಮ ವಿರೋಧವಿದೆ ಎಂದು ಖಂಡಿಸಿದ್ದರು.  ಇನ್ನು ಈ ವಿಚಾರ ಕುರಿತು ಸಮಜಾಯಿಷಿ ನೀಡಿದ ತಹಶೀಲ್ದಾರ್ ರವಿಶಂಕರ್ ವಿರುದ್ಧ ಸಮಿತಿಯ ಮುಖಂಡರು ಗರಂ ಆದ್ರು.

ಇನ್ನು ದುಂದಾಸನಪುರ ಬಳಿಯ ವಾಲ್ಮೀಕಿ ಸಮುದಾಯ ಭವನದ ಕಾಮಗಾರಿ ಶುರುವಾಗಿ 7 ವರ್ಷಗಳೇ ಕಳೆದರೂ ಪೂರ್ಣಗೊಂಡಿಲ್ಲ. ಇದಕ್ಕೆ ಅಧಿಕಾರಿಗಳ ದ್ವಂದ್ವ ನಿಲುವೇ ಕಾರಣವಾಗಿದೆ ಅಂತ ಪ್ರತಿಭಟನೆ ನಡೆಸಿದ್ರು.

ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ

- Advertisement -

Latest Posts

Don't Miss