Sunday, September 8, 2024

Latest Posts

ರಿಯಲ್ ಪ್ರೆಗ್ನೆಂಟ್ ಆಗಿ ನಟಿಸಿದ್ದು ಹೆಮ್ಮೆ. ಆ ಕಷ್ಟ ನನಗಷ್ಟೇ ಗೊತ್ತು ಬಿಡಿ: ಮಮತಾ ರಾವುತ್

- Advertisement -

Special Story: ಸ್ಯಾಂಡಲ್‌ವುಡ್‌ ನಟಿ ಮಮತಾಾ ರಾವುತ್, ಅತ್ಯುತ್ತಮ ನಟನಾ ಕೌಶಲ್ಯ ಹೊಂದಿದ್ದರು ಕೂಡ, ಅಷ್ಟಾಗಿ ಪ್ರಸಿದ್ಧಿ ಪಡೆಯದ ನಟಿ. ಇದಕ್ಕೆ ಕಾರಣವೇನು ಅಂತಾ ನಟಿಯೇ ಹೇಳಿದ್ದಾರೆ. ನಾನು ಮಾಡಿದ ಪಾತ್ರ ಅತ್ಯುತ್ತಮವಾಗಿದ್ದರೂ ಕೂಡ, ಆ ಸಿನಿಮಾ ಅಷ್ಟು ಜನಮನ್ನಣೆ ಗಳಿಸಲಿಲ್ಲ. ಹಾಗಾಗಿ ನಾನು ಅಷ್ಟು ಪ್ರಸಿದ್ಧಿ ಪಡೆಯಲಿಲ್ಲ ಎಂದಿದ್ದಾರೆ. ತಮ್ಮ ನಟನಾಾ ಜೀವನದ ಬಗ್ಗೆ ಮಮತಾ ಇನ್ನಷ್ಟು ಮಾತನಾಡಿದ್ದಾರೆ.

 

ಈ ಸಿನಿಮಾಗೂ ಮುನ್ನ ಮಮತಾ ರಾವುತ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕೆಲವರು ವಿವಾಹದ ಬಳಿಕ , ಚಿತ್ರರಂಗ ತೊರೆಯುತ್ತಾರೆ. ಆದರೆ ಮಮತಾ ಹಾಗೆ ಮಾಡಲಿಲ್ಲ. ನಾನು ಸ್ವಾಭಿಮಾನಿಯಾಗಿಯೇ ಇರಬೇಕೆಂದು ನಟನೆಯನ್ನು ಮುಂದುವರಿಸಿದರು. ಇದಕ್ಕೆ ಅವರ ಪತಿ ಕೂಡ ಸಾಥ್ ಕೊಟ್ಟರು. ಬಳಿಕ ಗರ್ಭಿಣಿಯಾದಾಗ, ತಾರಾಣಿ ಸಿನಿಮಾದಲ್ಲಿ ನಟಿಸಿ ಸೈ ಎನ್ನಿಸಿಕೊಂಡರು.

ತಾರಿಣಿ ಸಿನಿಮಾದ ವಿಶೇಷತೆ ಅಂದ್ರೆ ಮಮತಾ ರಾವುತ್ ನಿಜಜೀವನದಲ್ಲಿ ಗರ್ಭಿಣಿಯಾಗಿದ್ದರು. ಅಲ್ಲದೇ, ತಾರಿಣಿ ಸಿನಿಮಾದಲ್ಲೂ ಆಕೆ ಗರ್ಭಿಣಿಯ ಪಾತ್ರ ನಿರ್ವಹಿಸಿ, ತಮ್ಮದೇ ಮಗುವನ್ನು ಶೂಟಿಂಗ್ ಸ್ಪಾಟ್‌ಗೆ ಕರೆತಂದು, ಆ ಕೂಸಿನೊಂದಿಗೆ ನಟನೆ ಮಾಡಿದ್ದರು ಮಮತಾ. ಇದು ತಾರಿಣಿ ಸಿನಿಮಾದ ವಿಶೇಷತೆ.

ತಾರಿಣಿ ಸಿನಿಮಾವನ್ನು ಮಾಡಿದ್ದು ಮಮತಾ ರಾವುತ್ ಅವರ ಪತಿ. ಸೀಮಂತಕ್ಕೆ ಏನು ಗಿಫ್ಟ್ ಬೇಕೆಂದು ಕೇಳಿದಾಗ, ಈ ಸಂದರ್ಭದಲ್ಲಿ ನಾನೊಂದು ಸಿನಿಮಾದಲ್ಲಿ ನಟನೆ ಮಾಡಬೇಕು ಎಂದು ಹೇಳಿದ್ದೆ. ಅಲ್ಲದೇ, ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂದು ನನ್ನ ಪತಿ ತಾರಾಣಿ ಸಿನಿಮಾ ಮಾಡಿದ್ರು. ಇದರಲ್ಲಿ ನಾನು ಎಂತೆಂಥ ಚಾಲೆಂಜ್ ಅನುಭವಿಸಿದ್ದೇನೆ ಎಂದು ನನಗೇ ಗೊತ್ತು ಎಂದು ಮಮತಾ ಹೇಳಿದ್ದಾರೆ. ಪೂರ್ತಿ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss