ಕಲಬುರ್ಗಿ: ಜಿಲ್ಲೆಯ ಜ್ಞಾನಜ್ಯೋತಿ ಶಾಲೆಯ ಪಿಎಸ್ಐ ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದಂತ ಅಕ್ರಮದ ಜಾಲ ದಿನ ದಿನಕ್ಕೂ ವ್ಯಾಪಿಸುತ್ತಿದೆ. ಆರೋಪಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ನಡುವೆ, ಇಂದು ಪರೀಕ್ಷಾ ಕೇಂದ್ರದ ಹೆಡ್ ಮಾಸ್ಟರ್ ಕಾಶಿನಾಥ್ ಸಿಐಡಿ ಮುಂದೆ ಶರಣಾಗಿದ್ದಾರೆ.
ಸಿಐಡಿ ಪೊಲೀಸರು ಪಿಎಸ್ಐ ನೇಮಕಾತಿ ಅಕ್ರಮದಲ್ಲಿನ ಪ್ರಕರಣ ಕುರಿತಂತೆ ತನಿಖೆ ಚುರುಕುಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ಸಿಐಡಿ ತನಿಖೆಗೆ ಹಾಜರಾಗಿದ್ದಂತ 172 ಅಭ್ಯರ್ಥಿಗಳಲ್ಲಿ 22 ಮಂದಿ ಓಎಂಆರ್ ಶೀಟ್ ತಿದ್ದಿ, ಅಕ್ರಮವೆಸಗಿರೋದು ಎಫ್ಎಸ್ಎಲ್ ವರದಿಯಿಂದ ದೃಢಪಟ್ಟಿದೆ. ಹೀಗಾಗಿ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ಇನ್ನೂ ಇದೇ ಪ್ರಕರಣದಲ್ಲಿ ಕಲಬುರ್ಗಿಯ ಜ್ಞಾನ ಜ್ಯೋತಿ ಶಾಲೆಯ ಪ್ರಿನ್ಸಿಪಾಲ್ ಕಾಶಿನಾಥ್, ವಶಕ್ಕೆ ಸಿಐಡಿ ಪೊಲೀಸರು ಬಲೆ ಬೀಸಿದ್ದರು. ಈ ನಡುವೆ, ಅವರು ಇಂದು ಸಿಐಡಿ ಮುಂದೆ ಶರಣಾಗಿರೋದಾಗಿ ತಿಳಿದು ಬಂದಿದೆ.




