ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮದ ಸಂಬಂಧ ಸಮರವನ್ನೇ ಸಾರಿರುವಂತ ಸಿಐಡಿ ಅಧಿಕಾರಿಗಳು, ಬಂಧಿತ ಆರೋಪಿಗಳ ಮೊಬೈಲ್ ರಿಟ್ರೀವ್ ಗಾಗಿ ಸಲ್ಲಿಸಿದ್ದಂತ ಅರ್ಜಿಗೆ, ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಗೆ ಬಂಧಿತ 12 ಆರೋಪಿಗಳ ಮೊಬೈಲ್ ರಿಟ್ರೀವ್ ಗಾಗಿ ಅರ್ಜಿಯಲ್ಲಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದಂತೆ ನ್ಯಾಯಾಧೀಶರು, ಆರೋಪಿಗಳ ಮೊಬೈಲ್ ರಿಟ್ರೀವ್ ಗೆ ಅನುಮತಿ ನೀಡಿದೆ.
ಕೋರ್ಟ್ ಅನುಮತಿ ಬೆನ್ನಲ್ಲೇ ಬಂಧಿತ ಆರೋಪಿಗಳಿಗೆ ನಡುಕ ಶುರುವಾಗಿದೆ. ಅಕ್ರಮದಲ್ಲಿ ಯಾರ್ ಯಾರ್ ಜೊತೆಗೆ ಸಂಪರ್ಕ ಹೊಂದಿದ್ದೆವು. ಎಷ್ಟು ಪಿಎಸ್ಐ ನೇಮಕಾತಿಗಾಗಿ ಡೀಲ್ ನಡೆಸಲಾಗಿತ್ತು. ಯಾರ್ ಯಾರ್ ಗೆ ಎಷ್ಟು ಹಣ ನೀಡಲಾಗಿದೆ, ಪಡೆಯಲಾಗಿದೆ ಎನ್ನುವ ಮಾಹಿತಿಯೆಲ್ಲಾ ಸಿಕ್ಕಿ ಬೀಳೋ ಭಯ ಕೂಡ ಶುರುವಾಗಿ ಎನ್ನಲಾಗಿದೆ.




