Tuesday, April 15, 2025

Latest Posts

ಖಾಸಗಿ ಕಟ್ಟಡ ನಿರ್ಮಾಣಕ್ಕೆ ಮಾಯವಾಯ್ತು ಸಾರ್ವಜನಿಕ ಬಸ್ ಸ್ಟಾಪ್..!

- Advertisement -

www.karnatakatv.net : ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರವನ್ನು ಸ್ಮಾರ್ಟ್ ಮಾಡಲು ಸರ್ಕಾರ ಸಾಕಷ್ಟು ಯೋಜನೆಯನ್ನು ಜಾರಿಗೊಳಿಸಿದೆ.

ಹೌದು.. ಖಾಸಗಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿದ್ದು, ಹುಬ್ಬಳ್ಳಿಯ ವಿದ್ಯಾನಗರದ ಶಿರೂರು ಪಾರ್ಕ್ ಬಳಿ ಇದ್ದ ಬಸ್ ನಿಲ್ದಾಣ ಹಾಗೂ ಫುಟ್ ಪಾತ್ ಮಾಯವಾಗಿದೆ. ನೂತನ ಕಟ್ಟಡ ಕಾಮಗಾರಿಗೆ ಬಸ್ ನಿಲ್ದಾಣ ಅತಿಕ್ರಮಣವಾಗಿದ್ದು, ಕಟ್ಟಡ ಕಟ್ಟುವ ನೆಪದಲ್ಲಿ ಫುಟ್ ಪಾತ್ ಜೊತೆಗೆ ಬಸ್ ನಿಲ್ದಾಣವನ್ನೇ ತಗೆದಿದ್ದಾರೆ.

ಸುನಿಲ್ ಕೊಠಾರಿ ಎನ್ನುವವರಿಂದ ಕಟ್ಟಡ ನಿರ್ಮಾಣ ನಡೆಯುತ್ತಿದ್ದು, ಪಾಲಿಕೆಯ ಹಲವು ನೋಟಿಸ್ ಗೂ ಕ್ಯಾರೆ ಎನ್ನದೇ ಬೇಕಾಬಿಟ್ಟಿಯಾಗಿ ಕಟ್ಟಡ ನಿರ್ಮಾಣ ಕಾರ್ಯ ನಡೆದಿದೆ. ಬಹು ಅಂತಸ್ತಿನ ಕಟ್ಟಡಕ್ಕೆ ರಾಜಕಾರಣಿಗಳ  ಆಶೀರ್ವಾದವಿದೆ ಎನ್ನಲಾಗಿದೆ.

ಇನ್ನೂ ಬಸ್ ನಿಲ್ದಾಣದಿಂದ  ಕಟ್ಟಡ  4 ಅಡಿ ದೂರವಿರಬೇಕಿತ್ತು.  ಆದರೆ ಕಾಮಗಾರಿ ಆರಂಭಿಸಿರುವ ಮಾಲೀಕನ ನಡೆಯಿಂದ  ಬಸ್ ನಿಲ್ದಾಣವಿಲ್ಲದೆ ಸ್ಥಳೀಯರು ಪರದಾಡುವಂತಾಗಿದೆ. ಕೂಡಲೇ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ.

ಕರ್ನಾಟಕ ಟಿವಿ-ಹುಬ್ಬಳ್ಳಿ

- Advertisement -

Latest Posts

Don't Miss