PUC ಫಲಿತಾಂಶ ನಾಳೆ..!

www.karhnatakatv.net :ಮಹಾಮಾರಿ ಕೊರೊನಾ ಕಾರಣದಿಂದ ದ್ವಿತೀಯ ಪಿಯು ಪರೀಕ್ಷೆ ರದ್ದಾಗಿದ್ದು ಪಿಯುಸಿ ಫಲಿತಾಂಶವನ್ನು ಪ್ರಥಮ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಫಲಿತಾಂಶವನ್ನು ಕೊಡಲು ತೀರ್ಮಾನಿಸಲಾಗಿತ್ತು.

ಹಾಗೇ ದ್ವಿತೀಯ ಪಿಯುಸಿ ಶೈಕ್ಷಣಿಕ ಚಟುವಟಿಕೆಗಳಿಗೆ ನಿಗದಿಪಡಿಸಿದ ಅಂಕಗಳು ಮತ್ತು ಕೃಪಾಂಕಗಳ ಆಧಾರದ ಮೇಲೆ ಅಂಕಗಳನ್ನು ನಿಗದಿಪಡಿಸಿದ ಫಲಿತಾಂಶವನ್ನು ಘೋಷಣೆ ಮಾಡಲಾಗಿತ್ತು. ಹಾಗೆ ಅನೇಕ ವಿದ್ಯಾರ್ಥಿಗಳು ಆ ಫಲಿತಾಂಶವನ್ನು ಒಪ್ಪಿರಲ್ಲಿಲ್ಲ. ಸೆಪ್ಟೆಂಬರ್ ಹಾಗೂ ಆಗಸ್ಟ್ ಮೊದಲ ವಾರದಲ್ಲಿ ಮರು ಪರೀಕ್ಷೆ ನಡೆದಿತ್ತು. ಅದರ ಫಲಿತಾಂಶವು ನಾಳೆ ಘೋಷಣೆಯಾಗಲಿದೆ.

 ಸೆ.10ರಂದು ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕ ಘೋಷಣೆಯಾಗಲಿದ್ದು, ಪಿಯು ಬೋರ್ಡ್ ಫಲಿತಾಂಶದಲ್ಲಿ ಲಭ್ಯವಾಗಲಿದೆ. ನಾಳೆ ವಿಧಾನಸೌಧದಲ್ಲಿ 10.30ಕ್ಕೆ ಪಿಯುಸಿ ಫಲಿತಾಂಶ ಕುರಿತು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸುದ್ದಿಗೋಷ್ಟಿ ನಡೆಸಲಿದ್ದಾರೆ. ಹಾಗೆ ಪಿಯು ಬೋರ್ಡ್ ನಿರ್ದೇಶಕಿ ಡಾ ಆರ್ ಸ್ನೇಹಲ್ ಉಪಸ್ಥಿತಿ ಇರಲಿದ್ದಾರೆ.

About The Author