ಪುಣೆ: ಸಹಾಯಕ ಪೋಲಿಸ್ ಆಯುಕ್ತರಾದ ಭರತ್ ಗಾಯಕ್ವಾಡ್(57) ಅವರು ತನ್ನ ಪತ್ನಿಯಾದ ಮೋನಿ ಗಾಯಕ್ವಾಡ್(44) ಮತ್ತು ಸೋದರಳಿಯ ದೀಪಕ್(35) ಅವರನ್ನು ತನ್ನ ರಿವಲ್ವಾರ್ ನಿಂದ ಕೊಲೆಮಾಡಿ ಕೊನೆಗೆ ತಾನು ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಆದರೆ ಯಾವ ಕಾರಣಕ್ಕೆ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿಲ್ಲ.
ಪೋಲಿಸರ ಪ್ರಾಥಮಿಕ ಹೇಳಿಕೆ ಪ್ರಕಾರ ಮೋನಿ ಗಾಯಕ್ವಾಡ್ ಅವರನ್ನು ಅಮರಾವತಿಗೆ ಎಸಿಪಿಯಾಗಿ ನಿಯೋಜಿಸಲಾಗಿತ್ತು. ಆದರು ಈ ರೀತಿ ಕೊಲೆ ಮಾಡಲು ಕಾರಣ ಏನು ಎಂದು ತಿಳಿದುಬಂದಿಲ್ಲ
ಭರತ್ ಗಾಯಕ್ವಾಡ್ ಅವರು ಶನಿವಾರ ರಜೆಯಲ್ಲಿ ಹೆಂಡತಿ ಮಕ್ಕಳನ್ನು ಮಾತನಾಡಿಸಲು ಅಮರಾವತಿಯಲ್ಲಿರುವ ಬಂಗಲೆಗೆ ತೆರಳಿದ್ದರು ಆದರೆ ಸೋಮವಾರ ಬೆಳಿಗ್ಗೆ 3.30 ರ ಸುಮಾರಿಗೆ ಭರತ್ ಮೊದಲು ತನ್ನ ಹೆಂಡತಿಗೆ ಗುಂಡು ಹಾರಿಸಿದ್ದಾರೆ ನಂತರ ಗುಂಡಿನ ಶಬ್ದ ಕೇಳಿ ಕೋಣೆಯಿಂದ ಹೊರಬಂದ ಮಗ ಮತ್ತು ಅಳಿಯರನ್ನು ಕಂಡು ಸೋದರಳಿಯ ದೀಪಕ್ ಮೇಲೆ ಗುಂಡು ಹಾರಿಸಿ ನಂತರ ತಾನು ಗುಂಡು ಹಾರಿಸಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.
Boat Smart Ring : ಆರೋಗ್ಯಕ್ಕಾಗಿ ಬೋಟ್ ಕಂಪೆನಿಯಿಂದ ಸ್ಮಾರ್ಟ್ ರಿಂಗ್..!
Air India: ಹವಾ ನಿಯಂತ್ರಣದಲ್ಲಿ ದೋಷ , ದುಬೈಗೆ ಹೊರಟಿದ್ದ ವಿಮಾನ ತಿರುವನಂತಪುರಂನಲ್ಲಿ ಲ್ಯಾಂಡಿಂಗ್