Monday, December 23, 2024

Latest Posts

ಪುನೀತ್ ಪರ್ವಕ್ಕೆ ದೊಡ್ಮನೆ ಕುಟುಂಬದ ಭರ್ಜರಿ ತಯಾರಿ…!

- Advertisement -

Film News:

ಪವರ್ ಸ್ಟಾರ್ ಪವರ್ ಫುಲ್ ಪರ್ವ ಇದೀಗ ಕರುನಾಡಿನಲ್ಲಿ ಶುರುವಾಗಿದೆ. ಪುನೀತ್ ಪರ್ವಕ್ಕೆ ಇನ್ನೇನು ಬೆರಳೆನಿಕೆ ದಿನಗಳಷ್ಟೇ ಬಾಕಿ ಇದೆ. ದೊಡ್ಮನೆ ಕುಟುಂಬ ಪುನೀತ್ ಪರ್ವಕ್ಕೆ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಆ ಸಿದ್ದತೆ ಹೇಗಿದೆ ಇಲ್ಲಿದೆ ಕಂಪ್ಲೀಟ್ ಸ್ಟೋರಿ…
ಅಪ್ಪು ಅಗಲಿ ಒಂದು ವರುಷಗಳಾಗುತ್ತ ಬಂತು ಅಕಾಲಿಕವಾಗಿ ಕಣ್ಮರೆಯಾದ ಅಪ್ಪು ಈಗ ಅಭಿಮಾನಿಗಳ ಆರಾಧನಾ ದೈವ. ದೇವರ ಸ್ಥಾನದಲ್ಲಿರೋ ದೊಡ್ಮನೆ ಹುಡುಗನ ನೆನಪಿನ ಮೆಲುಕಿಗೆ ಮತ್ತೊಂದು ಕಾರ್ಯಕ್ರಮಕ್ಕೆ ಅಣಿಯಾಗುತ್ತಿದೆ ಕರುನಾಡು. ರಾಜ್ ಕುಟುಂಬ ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್ ನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಗಂಧದ ಗುಡಿ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲು ಸಿನಿಮಾತಂಡ ಹಾಗೂ ಕುಟುಂಬ ನಿರ್ಧರಿಸಿದೆ. ಹಾಗಾಗಿ ಇಡೀ ಕುಟುಂಬ ತೆರಳಿ ಸಿಎಂ ಅವರಿಗೆ ಆಹ್ವಾನ ನೀಡಿದೆ. ಪುನೀತ್ ಪರ್ವ ಎನ್ನುವ ಹೆಸರಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಅಪ್ಪು ಇಲ್ಲದೇ ಅವರ ನೆನಪಿನಲ್ಲಿ ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಕೊನೆಯ ಬಾರಿಗೆ ಪುನೀತ್ ರಾಜ್ ಕುಮಾರ್ ಅವರನ್ನು ತೆರೆಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ರೀ ರಿಲೀಸ್ ಈವೆಂಟ್‌ಗೆ ಸಿಎಂ ಸೇರಿದಂತೆ ಅನೇಕ ರಾಜಕೀಯ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ರಾಜಕೀಯ ಜೊತೆಗೆ ಅನೇಕ ಸಿನಿ ಗಣ್ಯರು ಸಹ ಅಪ್ಪು ಕೊನೆಯ ಸಿನಿಮಾದ ಈವೆಂಟ್ ನಲ್ಲಿ ಭಾಗಿಯಾಗಲಿದ್ದಾರೆ.
ಕನ್ನಡ ಸಿನಿಮಾ ಗಣ್ಯರು ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಗಣ್ಯರು ಪ್ರೀ ರಿಲೀಸ್ ಈವೆಂಟ್‌ನಲ್ಲಿ ಇರಲಿದ್ದಾರೆ ಸಿಎಂ ಭೇಟಿಯ ಬಳಿಕ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ‘ಅಕ್ಟೋಬರ್ 21 ಗಂಧದ ಗುಡಿ ಪ್ರೀ ರೀಲೀಸ್ ಈವೆಂಟ್ ಇದೆ. ಈ ಕಾರ್ಯಕ್ರಮಕ್ಕೆ ಸಿಎಂಗೆ ಆಹ್ವಾನ ಕೊಡಲು ಬಂದಿದ್ದೇವೆ. ಸೌತ್ ಇಂಡಿಯನ್ ಸ್ಟಾರ್ಸ್ ಗಳನ್ನ ಅಹ್ವಾನ ನೀಡಿದ್ದೇವೆ. ಅವರಿನ್ನೂ ಭಾಗವಹಿಸುವ ಬಗ್ಗೆ ದೃಢಪಡಿಸಿಲ್ಲ. ಇನ್ನೂ ಕಾರ್ಯಕ್ರಮದ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡಯಲಿದೆ. ಇದಕ್ಕೆ ಪುನೀತ್ ಪರ್ವ ಎಂದು ಹೆಸರಿಡಲಾಗಿದೆ. ಅಕ್ಟೋಬರ್ 28 ಕ್ಕೆ ಗಂಧದ ಗುಡಿ ಸಿನಿಮಾ ರಿಲೀಸ್ ಆಗಲಿದೆ. ಪುನಿತ್ ಸಾಕಷ್ಟು ಇಷ್ಟ ಪಟ್ಟು ಮಾಡಿದ ಕೊನೆ ಸಿನಿಮಾ ಇದು ಎಂದು ಹೇಳಿದರು.
ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾದ ಗಂಧದ ಗುಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಅವರನ್ನು ಕೊನೆಯ ಬಾರಿಗೆ ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

ಎಂಎಲ್‌ಎ ಆಗಲು ಉಮಾಪತಿ ಗೌಡ ಸಿದ್ಧತೆ.. ಡಿ ಬಾಸ್ ಬೆಂಬಲ ಯಾರಿಗೆ..?

ತಂದೆಯ ಹಾದಿ ಹಿಡಿದ ಸ್ಟಾರ್ ನಟನ ಮಗ..?! ನೆಟ್ಟಿಗರು ಫುಲ್ ಫಿದಾ…!

ದರ್ಶನ್ ರವರಿಗೆ ಈ ಸ್ಟೋರಿ ತಲುಪೋ ವರೆಗೂ ಶೇರ್ ಮಾಡಿ…!

- Advertisement -

Latest Posts

Don't Miss