ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಾಂಬಿನೇಷನ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾ ಯುವರತ್ನ. ರಾಜಕುಮಾರ ಸಿನಿಮಾದ ಬಳಿಕ ಅಪ್ಪು-ಸಂತೋಷ್ ಜೊತೆಯಾಗಿ ಮಾಡಿರೋ ಈ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಿದೆ. ಈಗಾಗ್ಲೇ ಟೀಸರ್ ಹಾಗೂ ಸಾಂಗ್ಸ್ ಮೂಲಕ ಹಲ್ ಚಲ್ ಎಬ್ಬಿಸ್ತಿರುವ ಯುವರತ್ನನ ಗ್ರ್ಯಾಂಡ್ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದೆ.

ಏಪ್ರಿಲ್ 1ಕ್ಕೆ ‘ಯುವರತ್ನ’ ರಿಲೀಸ್
ಹೊಸ ವರ್ಷದ ದಿನದಂದು ಅಪ್ಪು ಅಭಿಮಾನಿಗಳಿಗೆ ಭರ್ಜರಿ ರಸದೌತಣ ಉಣಬಡಿಸಿದ್ದಾರೆ. ಯುವರತ್ನನ ಸಿನಿಮಾವನ್ನು ತೆರೆಮೇಲೆ ನೋಡಲು ಕಾತುರದಿಂದ ಕಾಯ್ತಿದ್ದ ಭಕ್ತಗಣಕ್ಕೆ ಸಿಹಿಸುದ್ದಿ ಕೊಟ್ಟಿದ್ದಾರೆ. ಅದೇನಪ್ಪ ಅಂದ್ರೆ ಇದೇ ವರ್ಷದ ಏಪ್ರಿಲ್ 1ರಂದು ಯುವರತ್ನ ಬೆಳ್ಳಿತೆರೆ ಮೇಲೆ ರಾರಾಜಿಸಲಿದೆ. ಸ್ವತಃ ಅಪ್ಪು ಈ ವಿಷ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಂದಹಾಗೇ ಲಾಕ್ ಡೌನ್ ಬಳಿಕ ಥಿಯೇಟರ್ ಅಂಗಳಕ್ಕೆ ಎಂಟ್ರಿ ಕೊಡ್ತಿರುವ ಬಿಗ್ ಸ್ಟಾರ್ ಹಾಗೂ ಬಿಗ್ ಬಜೆಟ್ ಸಿನಿಮಾ ಅನ್ನೋ ಕೀರ್ತಿಗೆ ಯುವರತ್ನ ಪಾತ್ರವಾಗಿದೆ. ಈಗಾಗ್ಲೇ ಹಲವು ಸಣ್ಣ-ಪುಟ್ಟ ನಟರ ಸಿನಿಮಾಗಳು ರಿಲೀಸ್ ಆದ್ರೂ ಇಲ್ಲಿವರೆಗೂ ಯುವರತ್ನ ಸಿನಿಮಾ ಬಿಟ್ರೆ ಯಾವುದೇ ಬಿಗ್ ಸ್ಟಾರ್ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ. ಬಟ್ ಯುವರತ್ನ ಸಿನಿಮಾ ರಿಲೀಸ್ ಅನೌನ್ಸ್ ಮಾಡುವ ಮೂಲಕ ಕನ್ನಡಚಿತ್ರರಂಗಕ್ಕೆ ಬಿಗ್ ಓಪನಿಂಗ್ ಸಿಕ್ಕಿದೆ.

ಇನ್ನೂ ಸಿನಿಮಾ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ರಿಲೀಸ್ ಆಗ್ತಿದ್ದು, ಅಪ್ಪು ಜೊತೆ ಸಯೇಶ ಮಿಂಚಿದ್ದು, ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮಂಸ್ ಬಂಡವಾಳ ಹೂಡಿದೆ.