Thursday, December 12, 2024

Latest Posts

ಶಕ್ತಿಧಾಮದ ಮಕ್ಕಳೊಟ್ಟಿಗೆ ಕುಳಿತು ಅಪ್ಪು ಹಳೆ ಸಿನಿಮಾ ನೋಡಲಿದ್ದಾರೆ ಅಶ್ವಿನಿ ಪುನೀತ್ ರಾಜ್‌ಕುಮಾರ್…!

- Advertisement -

Film News:

ಅಪ್ಪು ನಿಧನದ ಬಳಿಕ ಅವರ ನಟನೆಯ ಎರಡು ಸಿನಿಮಾಗಳು ಬಿಡುಗಡೆ ಆಗಿವೆ. ಅದುವೇ ‘ಜೇಮ್ಸ್’ ಹಾಗೂ ‘ಲಕ್ಕಿ ಮ್ಯಾನ್’ ಎರಡೂ ಸಿನಿಮಾಗಳನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ವೀಕ್ಷಿಸಿಲ್ಲ. ಆದರೆ ಇದೇ ಮೊದಲ ಬಾರಿಗೆ ಅಪ್ಪು ಅಗಲಿಕೆ ಬಳಿಕ ಸಾರ್ವಜನಿಕವಾಗಿ ಪುನೀತ್ ಅವರ ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ವೀಕ್ಷಿಸಲಿದ್ದಾರೆ. ‘ಬೆಟ್ಟದ ಹೂ’ ನೋಡಲಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್ ದಸರಾ ಪ್ರಯುಕ್ತ ಮೈಸೂರಿನಲ್ಲಿ ನಡೆಯುತ್ತಿರುವ ಸಿನಿಮೋತ್ಸವದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಒಂದನ್ನು ವೀಕ್ಷಿಸಲಿದ್ದಾರೆ. ದೊಡ್ಮನೆ ಕುಟುಂಬದ ಹೆಮ್ಮೆಯ ಸೇವಾಕೇಂದ್ರ ಶಕ್ತಿಧಾಮದ ಮಕ್ಕಳೊಟ್ಟಿಗೆ ಕುಳಿತು ಪುನೀತ್ ರಾಜ್‌ಕುಮಾರ್ ಬಾಲನಟನಾಗಿ ನಟಿಸಿದ್ದ ‘ಬೆಟ್ಟದ ಹೂ’ ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ವೀಕ್ಷಿಸಲಿದ್ದಾರೆ. ಮೈಸೂರು ದಸರಾ ಸಿನಿಮೋತ್ಸವದ ಬಗ್ಗೆ ಇಂದು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಲನಚಿತ್ರೋತ್ಸವ ಕರ‍್ಯರ‍್ಶಿ ಟಿ.ಕೆ.ಹರೀಶ್ ಅವರು ಈ ವಿಷಯವನ್ನು ಹೇಳಿದ್ದಾರೆ ಎನ್ನಲಾಗಿದೆ.

ಟಿ.ವಿ ಸೀಸನ್ ಬಿಗ್ ಬಾಸ್ 9 ಗೆ ಬರಲಿದ್ದಾರೆ ರೂಪೇಶ್ ಶೆಟ್ಟಿ ..!

ಹೆಸರೇ ನಿಗದಿಯಾಗದ ಡಿ ಬಾಸ್ ಸಿನಿಮಾಕ್ಕೆ ಭರ್ಜರಿ ಪ್ರಚಾರ…!

ಬಳಕುವ ಬಳ್ಳಿಯಂತೆ ಫಿಟ್ ಆದ ಪೊರ್ಕಿ ಬೆಡಗಿ ಪ್ರಣೀತಾ

- Advertisement -

Latest Posts

Don't Miss