ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ಯುವರತ್ನ ಏಪ್ರಿಲ್ 1ರಂದು ಬೆಳ್ಳಿಪರದೆಗೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದೆ. ಕನ್ನಡದ ಜೊತೆಗೆ ತೆಗೆಲು ಭಾಷೆಯಲ್ಲಿಯೂ ಸಿನಿಮಾ ರಿಲೀಸ್ ಆಗ್ತಿದ್ದು, ಹೀಗಾಗಿ ಅದ್ಧೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಹಮ್ಮಿಕೊಳ್ತಿದೆ ಚಿತ್ರತಂಡ.

ಈಗಾಗ್ಲೇ ದೊಡ್ಡ ಮೊತ್ತಕ್ಕೆ ಯುವರತ್ನ ಸಿನಿಮಾದ ವಿತರಣೆ ಹಕ್ಕು ಸೇಲ್ ಆಗಿದೆಯಂತೆ. ಇದೇ ಖುಷಿಯಲ್ಲಿರುವ ಯುವರತ್ನ ಬಳಗ ಎರಡು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು, ಶಿರಿಡಿಯಲ್ಲಿ ಸದ್ಗುರು ಸಾಯಿ ಬಾಬಾ ದೇಗುಲ ಹಾಗೂ ಕೊಲ್ಲಾಪುರದಲ್ಲಿ ತಾಯಿ ಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ಸದ್ಯ ಯುವರತ್ನ ಸಿನಿಮಾ ರಿಲೀಸ್ ಆಗ್ತಿದ್ದು, ಅತ್ತ ಪ್ರೀ-ರಿಲೀಸ್ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಈ ಹಿನ್ನೆಲೆ ಯುವರತ್ನ ಟೀಂ ಈ ಎರಡು ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
