Saturday, July 5, 2025

Latest Posts

ಮುಂಬೈಗೆ ಸತತ ಐದನೆ ಸೋಲು

- Advertisement -

ಮುಂಬೈ:ನಾಯಕ ಮಯಾಂಕ್ ಅಗರ್‍ವಾಲ್ ಹಾಗೂ ಶಿಖರ್ ಧವನ್ ಅವರ ಸೊಗಸಾದ ಬ್ಯಾಟಿಂಗ್ ನೆರೆವಿನಿಂದ ಕಿಂಗ್ಸ್ ಲೆವೆನ್ ಪಂಜಾಬ್ ತಂಡ ಬಲಿಷ್ಠ ಮುಂಬೈ ವಿರುದ್ಧ 12 ರನ್‍ಗಳ ರೋಚಕ ಗೆಲುವು ಪಡೆಯಿತು.ಮುಂಬೈ ತಂಡ ಸತತ ಐದನೆ ಸೋಲು ಕಂಡಿತು.

ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಫಿಲ್ಡಿಂಗ್ ಆಯ್ದುಕೊಂಡಿತು.ಪಂಜಾಬ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಮಯಾಂಕ್ ಅಗರ್‍ವಾಲ್ (52 ರನ್) ಹಾಗೂ ಶಿಖರ್ ಧವನ್ (70) ಭರ್ಜರಿ ಬ್ಯಾಟಿಂಗ್ ಮಾಡಿ ಮೊದಲ ವಿಕೆಟ್‍ಗೆ 97 ರನ್ ಸೇರಿಸಿದರು.

ನಂತರ ಬಂದ ಜಾನಿ ಭೈರ್‍ಸ್ಟೊ (12 ರನ್) ಲಿಯಾಮ್ ಲೀವಿಂಗ್ ಸ್ಟೊನ್ (2 ರನ್), ಜಿತೇಶ್ ಶರ್ಮಾ ಅಜೇಯ 30 ರನ್, ಶಾರುಖ್ ಖಾನ್ 15, ಒಡಿಯಾನ್ ಸ್ಮಿತ್ 1 ರನ್ ಗಳಿಸಿದರು.

ಪಂಜಾಬ್ ತಂಡ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು.
199 ರನ್‍ಗಳ ಬೃಹತ್ ಗುರಿ ಬೆನ್ನತ್ತಿದ ಮುಂಬೈ ತಂಡಕ್ಕೆ ನಾಯಕ ರೋಹಿತ್ ಶರ್ಮಾ (28) ಹಾಗೂ ಇಶನ್ ಕಿಶನ್ (3) ಉತ್ತಮ ಆರಂಭ ಕೊಡುವಲ್ಲಿ ಎಡವಿದರು.

ಡೇವಾಲ್ಡ್ ಬ್ರೇವಿಸ್ 49, ತಿಲಕ್ ವರ್ಮಾ 39, ಕಿರಾನ್ ಪೊಲಾರ್ಡ್ 10,ಜಯದೇವ್ ಉನಾದ್ಕಟ್ 12, ಸೂರ್ಯಕುಮಾರ್ ಯಾದವ್ 43 ರನ್ ಗಳಿಸಿದರು.

ಮುಂಬೈ ತಂಡ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 186 ರನ್ ಕಲೆ ಹಾಕಿತು. ಮಯಾಂಕ್ ಅಗರ್‍ವಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರದರು.

- Advertisement -

Latest Posts

Don't Miss