Bengaluru News: ಪಂಜಾಬಿ ಮತ್ತು ಬಾಲಿವುಡ್‌ನ ಖ್ಯಾತ ಗಾಯ ದಲ್ಜೀತ್ ದೋಸಾಂಜ್ ಬೆಂಗಳೂರಿಗೆ ಬಂದು ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದಿದ್ದಾರೆ.
ಬೆಂಗಳೂರಿನ ಇಂದಿರಾ ನಗರದಲ್ಲಿರುವ ರಾಮೇಶ್ವರಂ ಕೆಫೆಗೆ ದಲ್ಜೀತ್ ವಿಸಿಟ್ ಮಾಡಿದ್ದು, ಬಿಸಿ ಬಿಸಿ ಇಡ್ಲಿ, ದೋಸೆ, ಫಿಲ್ಟರ್ ಕಾಫಿ ಸವಿದಿದ್ದಾರೆ. ದಲ್ಜೀತ್ ದಕ್ಷಿಣ ಭಾರತದ ಪ್ರವಾಸದಲ್ಲಿದ್ದು, ಇದರ ಭಾಗವಾಗಿ ಇಂದು ಬೆಂಗಳೂರಿಗೆ ಆಗಮಿಸಿದ್ದರು. ಇತ್ತೀಚೆಗೆ ರಾಮೇಶ್ವರಂ ಕೆಫೆಗೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಕೂಡ ಬಂದು, ತಿಂಡಿ ತಿಂದು, ಸೂಪರ್ ಎಂದು ಹೊಗಳಿ ಹೋಗಿದ್ದರು.
ಇದಾದ ಬಳಿಕ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ನಡೆದಿದ್ದು, ಸಖತ್ ಸುದ್ದಿಯಾಗಿತ್ತು. ಈ ಸ್ಪೋಟಕ್ಕೂ ಭಯೋತ್ಪಾದಕರಿಗೂ ನಂಟಿದೆ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಆದರೆ ಇದಕ್ಕೆಲ್ಲ ಕುಗ್ಗದ ರಾಮೇಶ್ವರಂ ಕೆಫೆ ಓನರ್ ಶಿವರಾತ್ರಿಯ ದಿನ ಮತ್ತೆ ಕೆಫೆ ಪುನರಾರಂಭ ಮಾಡಿ, ಉದ್ಯಮ ಮುಂದುವರಿಸಿದ್ದರು. ಇಲ್ಲಿ ಸಿಗುವ ಪುಡಿ ಇಡ್ಲಿ, ದೋಸೆ ಸಖತ್ ಫೇಮಸ್. ಫಿಲ್ಟರ್ ಕಾಫಿಗೆ ಇರುವ ಅಭಿಮಾನಿಗಳು ಅಷ್ಟಿಷ್ಟಲ್ಲ.