Friday, April 18, 2025

Latest Posts

ಕಲ್ಮಷವಿಲ್ಲದ ಭಕ್ತಿ…!

- Advertisement -

Devotional :

ಒಂದು ದಿನ ಒಬ್ಬ ರಾಜನು ಪುರಿಜಗನ್ನಾಥನ ದರ್ಶನಕ್ಕಾಗಿ ಜಗನ್ನಾಥನ ದೇವಸ್ಥಾನಕ್ಕೆ ಹೋದನು, ಹೋಗುವಷ್ಟರಲ್ಲಿ ಸಂಜೆಯಾಗಿತ್ತು ಅಷ್ಟೊತ್ತಿಗಾಗಲೇ ತಡವಾಗಿತ್ತು, ದೇವಸ್ಥಾವನ್ನು ಮುಚ್ಚುವ ಸಮಯವಾಗಿತ್ತು. ಅಷ್ಟರಲ್ಲಿ ದೇವಸ್ಥಾನದ ಹೂವಿನ ಅಂಗಡಿಯವಳು ಅವಳ ಬಳಿ ಇರುವ ಹೂಗಳನ್ನೆಲ್ಲಾ ಮಾರಿದ ನಂತರ ಒಂದು ಹೂವು ಮಾತ್ರ ಉಳಿದಿತ್ತು. ರಾಜನು ಆ ಹೂವನ್ನು ಕೇಳಿದನು ಅವಳು ಆ ಹೂವನ್ನು ಅವನಿಗೆ ಕೊಡಲು ಮುಂದಾದಾಗ ಅದೇ ಸಮಯದಲ್ಲಿ ಒಬ್ಬ ಶ್ರೀಮಂತ ವ್ಯಾಪಾರಿ ಬಂದು ಆ ಹೂವನ್ನು ಖರೀದಿಸಲು ದುಪ್ಪಟ್ಟು ದರವನ್ನು ನೀಡುವುದಾಗಿ ಹೇಳಿದನು. ನಂತರ ಆ ಒಂದು ಹೂವಿಗೆ ಹರಾಜಿನ ಸರಣಿ ಆರಂಭವಾಯಿತು ಕೊನೆಗೆ ,ರಾಜನು ತನ್ನ ಸಂಪೂರ್ಣ ರಾಜ್ಯವನ್ನು ಹೂವಿನ ಅಂಗಡಿಯವಳಿಗೆ ಕೊಟ್ಟು ಆ ಒಂದು ಹೂವನ್ನು ಹರಾಜಿನಲ್ಲಿ ಪಡೆದುಕೊಂಡನು. ಆ ಹೂವನ್ನು ಜಗನ್ನಾಥನಿಗೆ ಅರ್ಪಿಸಿ ಅದೇ ದೇವಸ್ಥಾನದ ಮಂಟಪದಲ್ಲಿ ಸಾಮಾನ್ಯ ಮನುಷ್ಯನಂತೆ ಮಲಗಿದನು. ಆ ರಾತ್ರಿ ಜಗನ್ನಾಥನು ಆ ರಾಜನ ಕನಸಿನಲ್ಲಿ ಬಂದು, ನನಗೆ ನಿನ್ನ ಈ ಹೂವಿನ ಭಾರವನ್ನು ತಾಳಲು ಆಗುತ್ತಿಲ್ಲ ಆ ಹೂವನ್ನು ತನ್ನ ತಲೆಯಿಂದ ತೆಗೆಯುವಂತೆ ಕೇಳಿದನು. ಆಗ ಆ ರಾಜನು ಜಗನ್ನಾಥನನ್ನು ಹೀಗೆ ಕೇಳಿದನು, ಸ್ವಾಮಿ ನಿನ್ನ ಕಿರುಬೆರಳಿನಿಂದ ಇಡೀ ಸೃಷ್ಟಿಯನ್ನು ಎತ್ತಬಲ್ಲ ನಿನಗೆ ಈ ಹೂವು ಏಕೆ ಭಾರವಾಗಿದೆ ಎಂದು ಕೇಳಿದನು .

ಆಗ ಜಗನ್ನಾಥ ,ರಾಜ ನಾನು ಈ ಇಡೀ ಸೃಷ್ಟಿಯನ್ನು ಎತ್ತಬಲ್ಲೆ ಆದರೆ ನಿನ್ನ ಭಕ್ತಿಯ ಭಾರವು ನನಗೆ ತುಂಬಾ ಹೆಚ್ಚಾಗಿದೆ. ಇಷ್ಟು ಅಗಾಧವಾದ ಭಕ್ತಿಯನ್ನು ಹೊತ್ತುಕೊಂಡು ಹೋಗುವುದು ತುಂಬಾ ಕಷ್ಟ ಎಂದು ಹೇಳುತ್ತಿದ್ದಾರೆ. ನೀನು ರಾಜ್ಯವಿಲ್ಲದೇ ಬದುಕುವುದು ಹೇಗೆ ಎಂದು ಯೋಚಿಸದೆ ನಿನ್ನ ನಿಷ್ ಕಲ್ಮಶ ಭಕ್ತಿಯಿಂದ ನನ್ನನ್ನು ಸಂತುಷ್ಟಗೊಳಿಸಿರುವೆ, ನಿನ್ನ ಭಕ್ತಿಗೆ ನಾನು ಬಹಳ ಸಂತೋಷಪಡುತ್ತೇನೆ ಹೋಗಿ ನಿನ್ನ ರಾಜ್ಯವನ್ನು ನೀನೇ ಆಳು ಎಂದು ಹೇಳಿ ಆ ಜಗನ್ನಾಥನು ಕಣ್ಮರೆಯಾದನು. ಭಗವಂತ ಯಾವಾಗಲು ಭಕ್ತರ ಕಲ್ಮಶವಿಲ್ಲದ ಭಕ್ತಿಯಿಂದ ಸಂತೋಷ ಗೊಂಡು ಭಕ್ತರನ್ನು ಆಶೀರ್ವದಿಸುತ್ತಾನೆ. ಕಲ್ಮಶದಿಂದ ಪೂಜಿಸಿದರೆ ದೇವರು ಮೆಚ್ಚುವುದಿಲ್ಲ .

ಮಹಾ ಶಿವನಿಗೆ ಪ್ರಿಯವಾದ ದೀಪಾರಾಧನೆ..!

ಶಕ್ತಿ ದೇವತೆಗೆ ಇಷ್ಟವಾದ ದೀಪಾರಾಧನೆ ಮಾಡಿ…!

ಮಹಾದೇವ ಶಿವನ ಅವತಾರಗಳ ಬಗ್ಗೆ ನಿಮಗೆಷ್ಟು ಗೊತ್ತು…?

- Advertisement -

Latest Posts

Don't Miss