Sunday, October 13, 2024

Latest Posts

‘ನನಗೆ ಯಾವ ನಿಂಬೆಹಣ್ಣೂ ಬೇಡ- ತಂದೆ ತಾಯಿ ಆಶೀರ್ವಾದ ಸಾಕು’- ಸಚಿವ ರೇವಣ್ಣ

- Advertisement -

ಬೆಂಗಳೂರು: ರಾಜ್ಯ ರಾಜಕೀಯ ಬಿಕ್ಕಟ್ಟಿಗೆ ತಾವು ಕಾರಣ ಅನ್ನೋ ಆರೋಪಕ್ಕೆ ಇಂದು ಸಚಿವ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಕೊಟ್ಟಿರುವ ಕೆಲಸವನ್ನು ನಾನು ಮಾಡ್ತಿದ್ದೇನೆ ಹೊರತು ಬೇರೆ ಯಾವ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ ಅಂತ ಹೇಳಿದರು. ಅಲ್ಲದೆ ತಮ್ಮ ಮೇಲೆ ದೈವ ಹಾಗೂ ತಂದೆ ತಾಯಿ ಆಶೀರ್ವಾದ ಇದೆ ಹೀಗಾಗಿ ನನಗೆ ಯಾವ ನಿಂಬೆಹಣ್ಣೂ ಬೇಡ ಅಂತ ಹೇಳಿದ್ರು.

ಬೆಂಗಳೂರಿನಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ರೇವಣ್ಣ, ತಮ್ಮ ಮೇಲೆ ವಿನಾಃಕಾರಣ ಆರೋಪ ಮಾಡೋದು ಸರಿಯಲ್ಲ. ನನ್ನ ಮೇಲೆ ಇಲ್ಲಿಯವರೆಗೂ ಮಾಡದ ಆರೋಪವನ್ನು ಅತೃಪ್ತ ಶಾಸಕರು ಮುಂಬೈಗೆ ಹೋದ ಬಳಿಕ ಮಾಡುತ್ತಿದ್ದಾರೆ. ನಾನು ಇಲ್ಲಿಯವರೆಗೂ ಯಾರಿಗೂ ಗುತ್ತಿಗೆ ನೀಡಿ ಅಂತ ಬೆಂಗಳೂರು ಪಾಲಿಕೆ ಆಯುಕ್ತರಿಗೆ ಕೇಳಿದ್ದರೆ ಇಂದೇ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಅಂತ ರೇವಣ್ಣ ಹೇಳಿದ್ರು. ಅಲ್ಲದೆ ಇಂತಹ ಆರೋಪಗಳಿಗೆಲ್ಲಾ ತಲೆ ಕೆಡಿಸಿಕೊಳ್ಳೋದಿಲ್ಲ ಎಂದರು. ನಾನು ಈ ವರೆಗೂ ಯಾವುದೇ ಶಾಸಕರ ಮನಸ್ಸಿಗೆ ನೋವುಂಟು ಮಾಡಿಲ್ಲ. ಒಂದು ವೇಳೆ ನೋವು ಮಾಡಿದ್ದರೆ ಅವರ ಕ್ಷಮೆ ಕೇಳುತ್ತೇನೆ ಅಂತ ಹೇಳಿದ್ರು.

ಇನ್ನು ತಾವು ನಿಂಬೆಹಣ್ಣು ಇಟ್ಟುಕೊಳ್ಳುವ ಕುರಿತ ಪ್ರಶ್ನೆಗೆ ಉತ್ತರಿಸಿದ ರೇವಣ್ಣ, ನನ್ನ ಮೇಲೆ ದೈವಾನುಗ್ರಹ ಮತ್ತು ತಂದೆ ತಾಯಿ ಆಶೀರ್ವಾದ ಇರುವವರೆಗೆ ನನಗೆ ಯಾವ ನಿಂಬೆಹಣ್ಣು ಬೇಕಾಗಿಲ್ಲ ಅಂತ ರೇವಣ್ಣ ಇದೇ ವೇಳೆ ಹೇಳಿದ್ರು.

ಬಿಎಸ್ವೈ ಗೇಮ್ ಪ್ಲ್ಯಾನ್ ಸಕ್ಸಸ್ ಆಗುತ್ತಾ..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=tHNiwIjvC5E
- Advertisement -

Latest Posts

Don't Miss