ಕೋಟಿ ಕೋಟಿ ಹಣ ನುಂಗಿ ಕಚೇರಿಗೆ ಬೀಗ ಹಾಕಿದ ಪಿಗ್ಮಿ ಕಂಪನಿ: ದೂರು ದಾಖಲು

Mandya News: ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಬ್ಲೇಡ್ ಫೈನಾನ್ಸ್ ಕಂಪನಿ ಜನರಿಗೆ ಕೋಟಿ ಕೋಟಿ ನಾಮ ಹಾಕಿದೆ. ಸಮಗ್ರ ಅಭಿವೃದ್ಧಿ ಮೈಕ್ರೋ ಫೈನಾನ್ಸ್ ಕಂಪನಿ ಹೆಸರಲ್ಲಿ ಮಂಡ್ಯದ ನಾಗಮಂಗಲ ತಾಲೂಕಿನ ಜನರಿಗೆ ಕೋಟಿ ಕೋಟಿ ರೂಪಾಯಿ ಉಂಡೇ ನಾಮ ಹಾಕಲಾಗಿದೆ.

ಇಲ್ಲಿನ ಪಿಗ್ಮಿ ಕಂಪನಿಯ“ಂದು ತಾಲೂಕಿನ ಸಾವಿರಾರು ಜನರ ಬಳಿ ಕೋಟಿ ಕೋಟಿ ಹಣ ಸಂಗ್ರಹ ಮಾಡಿ, ಕಚೇರಿಗೆ ಬೀಗ ಹಾಕಿ ಪರಾರಿಯಾಗಿದೆ. ಆದರೆ ಈ ಕಂಪನಿಯನ್ನು ನಂಬಿ ಹಣ ಕಟ್ಟಿದ ಮಂದಿ ಮಾತ್ರ, ಹಣಕ್ಕಾಗಿ ಪ್ರತಿದಿನ ಕಚೇರಿ ಮುಂದೆ ಅಲೆದಾಡುತ್ತಿದ್ದಾರೆ. ನಾಗಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ವಂಚನೆ ಮಾಡಿದವರ ವಿರುದ್ಧ ದೂರು ನೀಡಲಾಗಿದೆ.

About The Author