International News: ಬೈರುತ್‌ನಿಂದ ಲೆಬನಾನ್‌ಗೆ ತೆರಳುವ ಕತಾರ್ ಏರ್‌ವೇಸ್‌ನಲ್ಲಿ ವಾಕಿ-ಟಾಕಿ ನಿಷೇಧಿಸಲಾಗಿದೆ. ಲೆಬನಾನ್‌ನಲ್ಲಿ ವಾಕಿ-ಟಾಕಿ, ಪೇಜರ್ ಬ್ಲಾಸ್ಟ್ ಆದ ಬಳಿಕ, ಕತಾರ್ ಏರ್‌ವೇಸ್ ಈ ನಿರ್ಧಾರ ತೆಗೆದುಕೊಂಡಿದೆ.
ಈ ಘಟನೆಯಲ್ಲಿ 30ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. 450ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಸಾವನ್ನಪ್ಪಿದವರಲ್ಲಿ ಬಾಲಕಿಯೊಬ್ಬಳು ಸೇರಿ, ಹಲವು ಪುರುಷರು ಸಾವಿಗೀಡಾಗಿದ್ದರು. ಹೆಚ್ಚಿನವರು ಹಿಜ್ಬುಲ್ ಸಂಘಟನೆಯವರಾಗಿದ್ದು, ಈ ಘಟನೆಗೆ ಇಸ್ರೇಲ್ ನೇರ ಕಾರಣವೆಂದು ಹಿಜ್ಬುಲ್ ಸಂಘಟನೆ ಆರೋಪಿಸಿದ್ದಾರೆ. ಆದರೆ ಇಸ್ರೇಲ್ ಮಾತ್ರ, ತುಟಿಕ್ ಪಿಟಿಕ್ ಎನ್ನದೇ, ಜಾಣ ಮೌನ ವಹಿಸಿದೆ. ಈ ಮೂಲಕ ಇಸ್ರೇಲ್ ಈ ದಾಳಿ ಮಾಡಿರಬಹುದು ಅಂತಲೇ ಎಲ್ಲರೂ ಅಂದಾಜಿಸಿದ್ದಾರೆ.
ಇನ್ನು ವಾಕಿ ಟಾಕಿ, ಮೊಬೈಲ್, ರೇಡಿಯೋ, ಪೇಜರ್ ಬ್ಲಾಸ್ಟ್ ಆದ ಕಾರಣಕ್ಕೆ, ಕತಾರ್ ಏರ್‌ವೇಸ್‌ನಲ್ಲಿ ವಾಕಿ ಟಾಕಿ, ಪೇಜರ್ ತರುವುದನ್ನು ನಿಷೇಧಿಸಲಾಗಿದ್ದು, ಮುಂದಿನ ಆದೇಶ ಬರುವವರೆಗೂ ಈ ನನಿಯಮ ಜಾರಿಯಲ್ಲಿರುತ್ತದೆ ಎಂದು ಸಂಸ್ಥೆ ತಿಳಿಸಿದೆ.