www.karnatakatv.net: ಕ್ವಾಡ್ ರಾಷ್ಟ್ರಗಳು ಕೋವ್ಯಾಕ್ಸ್ ಜಾಗತಿಕ ಲಸಿಕಾ ಸಹಯೋಗದಲ್ಲಿ ಲಸಿಕೆಗೆ ಹಣಕಾಸು ನೆರವು ನೀಡುವ ಜೊತೆಗೆ 1.2 ಬಿಲಿಯನ್ ಕೊರೊನಾ ಲಸಿಕೆಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗುತ್ತಿದೆ ಎಂದು ಜಂಟಿ ಹೇಳಿಕೆ ನೀಡುವುದಾಗಿ ಶ್ವೇತಭವನದಲ್ಲಿ ಉಲ್ಲೇಖಿಸಿದೆ.
ಕೊರೊನಾ ಜಾಗತಿಕವಾಗಿ ನಿರಂತರ ಸಂಕಟ ಉಂಟುಮಾಡಿದ್ದು, ಹವಾಮಾನ ಬಿಕ್ಕಟ್ಟು ಕೂಡಾ ವೇಗಪಡೆದುಕೊಂಡಿದೆ. ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾ ಕ್ವಾಡ್ ದೇಶಗಳು ಕೊರೊನಾ ಸಾಂಕ್ರಾಮಿಕದ ನಡುವೆ ಜಾಗತಿಕವಾಗಿ 1.2 ಬಿಲಿಯನ್ ಡೋಸ್ಗಳ ಕೊರೊನಾ ಲಸಿಕೆಯನ್ನು ಒದಗಿಸಲು ಪ್ರತಿಜ್ಞೆಯನ್ನು ಮಾಡಿದ್ದಾರೆ. ಪ್ರಾದೇಶಿಕ ಭದ್ರತೆಯು ಹೆಚ್ಚಾಗಿದ್ದು, ಎಲ್ಲಾ ದೇಶಗಳು ಪ್ರತ್ಯೇಕವಾಗಿ ಹಾಗೂ ಒಟ್ಟಿಗೆ ಪರೀಕ್ಷೆಗೆ ಒಡ್ಡಿದಂತಿದೆ. ಆದರೆ ದೇಶಗಳ ನಡುವೆ ಸಹಕಾರ ಗಟ್ಟಿಯಾಗಿದೆ ಎಂದು ಕ್ವಾಟ್ ದೇಶಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹಾಗೂ ಜಪಾನ್ ಪ್ರಧಾನಿ ಯೋಜಿಹಿದೆ ಸುಗಾ ನಿನ್ನೇ ಕ್ವಾಡ್ ಸಭೆಯನ್ನು ನಡೆಸಿದ್ದಾರೆ. ಈ ಸಭೆಯಲ್ಲಿ ಅನೇಕ ಜಾಗತಿಕ ವಿಷಯಗಳ ಕುರಿತು ಚರ್ಚೆಯನ್ನು ಮಾಡಲಾಗಿದೆ.
ನಾವು ಇಂಡೊ ಪೆಸಿಫಿಕ್ ನಲ್ಲಿ ಆರೋಗ್ಯ ಕ್ಷೇತ್ರದ ಭದ್ರತೆ ತರುವ ಸಂಬಂಧ ಸಮನ್ವಯವನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದ್ರು. ‘ ಅಂತರಾಷ್ಟ್ರಿಯ ಸಹಕಾರಕ್ಕಾಗಿ ಜಪಾನ್ ಬ್ಯಾಂಕ್ ಮೂಲಕ ಭಾರತದೊಂದಿಗೆ ಲಸಿಕೆ ಹಾಗೂ ಔಷಧಿಗಳನ್ನು ಒಳಗೊಂಡಂತೆ ಕೊರೊನಾಗೆ ಸಂಬಂಧಿಸಿದಂತೆ ಸುಮಾರು ನೂರು ಮಿಲಿಯನ್ ಡಾಲರ್ ಗಳ ಪ್ರಮುಖ ಹೂಡಿಕೆಯನ್ನು ಹೆಚ್ಚಿಸಲು ಭಾರತದೊಂದಿಗೆ ಯಾರ್ಯನಿರ್ವಹಿಸುತ್ತೆವೆ ಎಂದು ಜಪಾನ್ ಹೇಳಿಕೆ ನೀಡಿದೆ.
ಹಾಗೇ ಕ್ವಾಡ್ ನಾಯಕರ ಸಭೆಯಲ್ಲಿ ಪ್ರಧಾನಿ ಮೋದಿ ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಪರಸ್ಪರ ಒಪ್ಪಿತ ಹಾಗೂ ಸಾಮಾನ್ಯ ಅಂತರರಾಷ್ಟ್ರೀಯ ಪ್ರಮಾಣ ಶಿಷ್ಟಾಚಾರಗಳ ಕುರಿತು ಪ್ರಸ್ತಾಪ ಮಾಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗಾ ಹೇಳಿದ್ದಾರೆ.