ಕುಮಾರಸ್ವಾಮಿ ಬೇನಾಮಿ ಆಸ್ತಿ ಬಗ್ಗೆ ಶೀಘ್ರ ಮಾಹಿತಿ: ರಮೇಶ್ ಬಂಡಿಸಿದ್ದೇಗೌಡ

Political News: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಅವರು ಸ್ನೇಹಿತರು ಎಷ್ಟೆಲ್ಲ ಬೇನಾಮಿ ಆಸ್ತಿ ಮಾಡಿದ್ದಾರೆಂದು ಇನ್ನು ಎರಡೇ ದಿನಗಳಲ್ಲಿ ತಿಳಿಸುತ್ತೇನೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡರ ಹೇಳಿದ್ದಾರೆ.

ಹಾಸನದಲ್ಲಿ ಮಾತನಾಡಿದ ರಮೇಶ್, ಮುಡಜಾ ಹಗರಣದಲ್ಲಿ ಸಿದ್ದರಾಮಯ್ಯ ಸತ್ತವರ ಹೆಸರಿನಲ್ಲಿ ಡಿನೊಟಿಫಿಕೇಶನ್ ಮಾಡಿಸಿದ್ದಾರೆಂದು ಆರೋಪಿಸಿದಕ್ಕೆ ಪ್ರತಿಕ್ರಿಯಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಎಷ್ಟು ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಮಾಹಿತಿ ಕಲೆ ಹಾಕುತ್ತಿದ್ದೇವೆ. ಯಾವ ಹಗರಣದಲ್ಲಿ ಯಾರು ಎಷ್ಟು ಆಸ್ತಿ ಮಾಡಿದ್ದಾರೆಂದು ಲೆಕ್ಕ ಹಾಕಿದ್ದೇನೆ. ವೈಯಕ್ತಿಕ ದ್ವೇಷ ಬೇಡವೆಂದು ಸುಮ್ಮನಿದ್ದೇವೆ ಎಂದು ರಮೇಶ್ ಹೇಳಿದ್ದಾರೆ.

ಜೆಡಿಎಸ್- ಬಿಜೆಪಿಗರು ಸರ್ಕಾರದ ಮೇಲೆ ಗದಾ ಪ್ರಹಾರ ಮಾಡುತ್ತಿದ್ದಾರೆ. ಆದಷ್ಚು ಬೇಗ ಎಲ್ಲವನ್ನೂ ರಾಷ್ಟ್ರಪತಿಗಳಿಗೆ ಮನದಟ್ಟು ಮಾಡಿಕೊಡೋಣವೆಂದು ನಾವು ಚರ್ಚಿಸಿದ್ದೇವೆ. ರಾಷ್ಟ್ರಪತಿಗಳನ್ನು ಎಲ್ಲರೂ ಸೇರಿ ಭೇಟಿಯಾಗಲಿದ್ದೇವೆ ಎಂದು ರಮೇಶ್ ಹೇಳಿದ್ದಾರೆ.

ಇನ್ನು ಡಿಕೆಶಿ ಎರಡು ಸ್ಥಾನವನ್ನು ಹೊಂದಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಲಿದ್ದೇನೆ ಎಂದಿದ್ದಾರೆ. ಆ ಸ್ಥಾನಕ್ಕೆ ಯಾರನ್ನು ನೇಮಿಸಬೇಕು ಎಂದು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ರಮೇಶ್ ಹೇಳಿದ್ದಾರೆ.

About The Author