Sunday, September 8, 2024

Latest Posts

ಸುಲಭವಾಗಿ ಆರೋಗ್ಯಕರವಾದ ರಾಗಿ ಹಿಟ್ಟಿನ ಲಾಡು ಮಾಡುವುದು ಹೇಗೆ..?

- Advertisement -

ಇತ್ತಿಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಜನರು ಕಾಳಜಿ ವಹಿಸುತ್ತಿದು, ಮನೆಯಲ್ಲಿಯೇ ಆರೋಗ್ಯಯುತವಾದ ತಿನಿಸುಗಳನ್ನು ಮಾಡಲು ಹೊಸ ರೆಸಿಪಿಗಳನ್ನು ಹುಡುಕುತ್ತಿರುತ್ತಾರೆ ಅಂತವರಿಗೆ ಹೊಸ ರೆಸಿಪಿಯನ್ನು ತಂದಿದ್ದೇವೆ ಮಾಡಿ ನೋಡಿ ಹೇಗಿದೆ ಎಂದು ತಿಳಿಸಿ. ಹೊರಗಿನ ಸಿಹಿ ಪದಾರ್ಥಗಳು ತಿಂದು ಬೋರ್ ಆಗಿದ್ದರೆ, ಈ ಸಿಹಿ ಲಾಡುವನ್ನು ಒಮ್ಮೆ ಮಾಡಿ ನೋಡಿ ಖಂಡಿತ ನಿಮಗೆ ಇಷ್ಟವಾಗುತ್ತದೆ.

ಮನೆಯಲ್ಲೇ ತಯಾರಿಸಿ ರುಚಿಕರ ಕ್ಯಾಬೇಜ್ ವಡೆ..

ಆರೋಗ್ಯಕ್ಕೂ ಒಳ್ಳೆಯದು ಮತ್ತು ಸವಿಯಲು ರುಚಿಯಾಗಿರುವ  ರಾಗಿ ಹಿಟ್ಟಿನ ಲಾಡು ಮಾಡುವ ವಿಧಾನವನ್ನು ನೋಡೊನ ಬನ್ನಿ,

ರಾಗಿ ಹಿಟ್ಟಿನ ಲಾಡು ಮಾಡಲು ಬೇಕಾಗುವ ಸಾಮಾಗ್ರಿಗಳು

ರಾಗಿ ಹಿಟ್ಟು ಒಂದು ಕಪ್, ಬೆಲ್ಲ ಅರ್ಧಕಪ್, ತುಪ್ಪ ಸ್ವಲ್ಪ ಮತ್ತು ಡ್ರೈ ಫ್ರೂಟ್ಸ್ ಸ್ವಲ್ಪ

ರಾಗಿಹಿಟ್ಟಿನ ಲಾಡು ಮಾಡುವ ವಿಧಾನ

1.ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಬಿಸಿಯಾದ ನಂತರ ಡ್ರೈ ಫ್ರೂಟ್ಸ್ ಅನ್ನು ಬಾಣಲೆಗೆ ಹಾಕಿ ಹುರಿದುಕೊಳ್ಳಿ, ನಂತರ ಒಂದು ತಟ್ಟೆಗೆ ತೆಗೆಯಿರಿ.

2.ಅದೇ ಬಾಣಲೆಗೆ ರಾಗಿಹಿಟ್ಟನ್ನು ಹಾಕಿ, ಸಣ್ಣ ಉರಿಯಲ್ಲಿ ಚೆನ್ನಾಗಿ ಹಸಿ ವಾಸನೆ ಹೋಗುವವರೆಗ 15 ನಿಮಿಷ ಹುರುಯಿರಿ.

3.ನಂತರ ಸ್ಟವ್ ಆಫ್ ಮಾಡಿ ಕೆಳಗೆ ಇಳಿಸಿ,  ಬೆಲ್ಲ ಪುಡಿಮಾಡಿಕೊಂಡು ಚೆನ್ನಾಗಿ ಹಿಟ್ಟಿನೊಂದಿಗೆ ಮಿಶ್ರಣ ಮಾಡಿ,

4.ಇನ್ನೊಂದು ಬಾಣಲೆಗೆ 8 ಚಮಚ ತುಪ್ಪ ಹಾಕಿ ಬಿಸಿ ಮಾಡಿಕೊಂಡು ರಾಗಿಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ಮತ್ತೆ ಚೆನ್ನಾಗಿ ಲಾಡು ಹದಕ್ಕೆ ಬರುವವರೆಗೆ ಮಿಶ್ರಣ ಮಾಡಿಕೊಳ್ಳಿ.

5.ನಂತರ ಹುರಿದಿಟ್ಟುಕೊಂಡ ಡ್ರೈ ಫ್ರೂಟ್ಸ್ ಅನ್ನು ಸೇರಿಸಿ ಸ್ವಲ್ಪ ಬಿಸಿ ಇರುವಾಗಲೇ ರಾಗಿಹಿಟ್ಟನ್ನು ನಿಂಬೆ ಗಾತ್ರದಷ್ಟು ತೆಗೆದುಕೊಂಡು  ಉಂಡೆಗಳನ್ನು ಮಾಡಿ ಸವಿಯಿರಿ.

ಬೂದುಗುಂಬಳಕಾಯಿಯ ಸಿಪ್ಪೆಯಲ್ಲೂ ಇದೆ ಆರೋಗ್ಯಕರ ಲಾಭ..

ಸ್ನಾನ ಮಾಡಿ ಊಟ ಮಾಡಬೇಕು ಅಂತಾ ಹೇಳೋದ್ಯಾಕೆ..? ಇದರ ಹಿಂದಿನ ವೈಜ್ಞಾನಿಕ ಸತ್ಯವೇನು..?

- Advertisement -

Latest Posts

Don't Miss