Tuesday, October 21, 2025

Latest Posts

ಅದ್ದೂರಿಯಾಗಿ ದೀಪಾವಳಿ ಸೆಲೆಬ್ರೇಶನ್ ಮಾಡಿದ ರಾಧಿಕಾ ಕುಮಾರಸ್ವಾಮಿ!

- Advertisement -

ದೀಪಾವಳಿ ಹಬ್ಬ ಅಂದ್ರೆ ಎಲ್ಲರ ಮನೆಗಳಲ್ಲಿ ದೀಪಗಳ ಸಂಭ್ರಮ, ಮನಗಳಲ್ಲಿ ಸಂತೋಷ ಮನೆ ಮಾಡಿರತ್ತೆ. ಅದರಂತೆ ಸೆಲೆಬ್ರೆಟಿಗಳು ಕೂಡ ದೀಪಾವಳಿ ಹಬ್ಬವನ್ನ ಹಬ್ಬವನ್ನ ಆಚರಿಸುತ್ತಾರೆ. ಅದರಲ್ಲೂ ರಾಧಿಕಾ ಕುಮಾರಸ್ವಾಮಿ ಅವರು ಒಂದು ಹೆಜ್ಜೆ ಮುಂದೆ ಇರ್ತಾರೆ. ರಾಧಿಕಾ ಕುಮಾರಸ್ವಾಮಿ ಅವರು ಪ್ರತಿ ಬಾರಿಯೂ ತಪ್ಪದೇ ಹಬ್ಬಗಳನ್ನು ಸೆಲೆಬ್ರೇಟ್ ಮಾಡುತ್ತಾರೆ . ಈಗ ಅವರು ಖುಷಿಯಿಂದ ದೀಪಾವಳಿ ಆಚರಣೆ ಮಾಡಿಕೊಂಡಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಯಾವುದೇ ಹಬ್ಬ ಹರಿದಿನಗಳಲ್ಲಿ ಮಿಸ್ ಮಾಡದೆ ಸೆಲೆಬ್ರೆಟ್ ಮಾಡ್ತಾರೆ. ಅವರು ಮಾತ್ರ ಅಂದವಾಗಿ ರೆಡಿ ಆಗೋದಲ್ಲದೆ, ತಮ್ಮ ಮನೆಯನ್ನ ಕೂಡ ಅಂದವಾಗಿ ರೆಡಿ ಮಾಡ್ತಾರೆ. ನೋಡುಗರ ಕಣ್ಮನ ಸೆಳೆಯುತ್ತಾರೆ. ರಾಧಿಕಾ ಕುಮಾರಸ್ವಾಮಿ ತಮ್ಮ ಕುಟುಂಬದೊಂದಿಗೆ ದೀಪಾವಳಿ ಹಬ್ಬವನ್ನ ಅದ್ದೂರಿಯಾಗಿ ಆಚರಿಸುತ್ತಾರೆ.

ಆಗಾಗ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶುಭಾಶಯಗಳನ್ನು ಪೋಸ್ಟ್ ಮಾಡುತ್ತಾರೆ. ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಬೆಳಕಿನ ಹಬ್ಬಕ್ಕೆ ಶುಭಾಶಯಗಳನ್ನು ಕಳುಹಿಸುವುದು ಮತ್ತು ಮನೆಯಲ್ಲಿ ಬಣ್ಣ ಬಣ್ಣದ ಹೂಗಳಿಂದ ಮನೆಯನ್ನ ಅಲಂಕಾರ ಮಾಡಿರೋದು ಕೂಡ ಸೇರಿದೆ. ರಾಧಿಕಾ ಕುಮಾರಸ್ವಾಮಿ ಕಂದು ಬಣ್ಣದ ಡ್ರೆಸ್ ಧರಿಸಿ, ಸಕತ್ ರೆಡಿ ಆಗಿದ್ದಾರೆ. ಅದರಂತೆ ತಮ್ಮ ಮನೆಯನ್ನು ಕೂಡ ಅಲಂಕಾರಗೊಳಿಸಿದ್ದಾರೆ.

ಬಣ್ಣ ಬಣ್ಣದ ಹೂಗಳನ್ನ ಕಟ್ಟಿದ್ದಾರೆ. ಬಣ್ಣ ಬಣ್ಣದ ಹೂಗಳಿಂದ ರಂಗೋಲಿ ಬಿಡಿಸಿದ್ದಾರೆ. ರಂಗೋಲಿ ಸುತ್ತಲೂ ದೀಪಗಳನ್ನ ಇಟ್ಟಿದ್ದಾರೆ. ತಾವು ಕೈಯಲ್ಲಿ ದೀಪಗಳನ್ನ ಹಿಡಿದುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದೀಪಾವಳಿ ಹಬ್ಬದ ಶುಭಾಶಯಗಳು, ದೀಪಾವಳಿ ನಿಮ್ಮ ಬಾಳಿನಲ್ಲಿ ಸಮೃದ್ಧಿ ಹಾಗೂ ಸಂತೋಷವನ್ನು ತರಲಿ ಅಂತ ತಮ್ಮ ಫಾಲ್ಲೋರ್ಸ್ ಗೆ ವಿಶ್ ಕೂಡ ಮಾಡಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss