Tuesday, November 11, 2025

Latest Posts

ದೀಪೋತ್ಸವ ಆಚರಿಸಿದ ‘ಜೀನಿ’ ಹಬ್ಬಕ್ಕೆ ವಿಶೇಷ ಉಡುಗೊರೆ!

- Advertisement -

ಜೀನಿ ಕಂಪನಿಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಹಾಗೂ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಎರಗುಂಟೆ ಗ್ರಾಮದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ಈ ಸಂಧರ್ಭದಲ್ಲಿ ಜೀನಿ ಕಂಪನಿಯ ಮಾಲೀಕರಾದ ಶ್ರೀ ದಿಲೀಪ್ ಕುಮಾರ್ ಅವರ ನೇತೃತ್ವದಲ್ಲಿ, ಜೀನಿ ಸಂಸ್ಥೆಯಲ್ಲಿ ಕೆಲಸಮಾಡುತ್ತಿರುವ 500ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ವಿಶೇಷ ಉಡುಗೊರೆ ಹಾಗೂ ಸಿಹಿ ಪಾಕವನ್ನೊಳಗೊಂಡ ಸಿಹಿ ತಿಂಡಿಯ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು. ಜೊತೆಗೆ ಎಲ್ಲಾ ಸಿಬ್ಬಂದಿಗಳಿಗೂ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

ಸಂಭ್ರಮದ ಬೆಳಕಿನ ಹಬ್ಬವನ್ನು ಈ ರೀತಿಯಾಗಿ ಸಂಭ್ರಮದಿಂದ ಆಚರಿಸಿದ ‘ಜೀನಿ’ ಸಂಸ್ಥೆ, ಸಾಮಾಜಿಕ ಜವಾಬ್ದಾರಿಯ ಮಾದರಿಯಾಗಿ ಮೆಚ್ಚುಗೆ ಪಡೆದಿದೆ. ಒಟ್ಟಾರೆಯಾಗಿ ಜೀನಿ ಕಂಪನಿ ಅದ್ದೂರಿಯಾಗಿ ದೀಪಾವಳಿ ಆಚರಿಸಿ ಸಂಭ್ರಮಿಸಿದೆ.

ದೀಪಾವಳಿ ಪ್ರಯುಕ್ತ ಸಂಸ್ಥೆಯ ಎಲ್ಲಾ ವಾಹನಗಳಿಗೆ ಶ್ರದ್ಧಾಪೂರ್ವಕವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು. ಸಂಸ್ಥೆಯ ಪ್ರತಿ ವಿಭಾಗದ ಸಿಬ್ಬಂದಿಯೂ ಈ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಹಬ್ಬದ ಸಡಗರವನ್ನು ಮತ್ತಷ್ಟು ದ್ವಿಗುಣಗೊಳಿಸಿದ್ದಾರೆ.

‘ಜೀನಿ’ ಕುಟುಂಬದ ಎಲ್ಲಾ ಸದಸ್ಯರೊಂದಿಗೆ ಒಂದೇ ಮನಸ್ಸಿನಿಂದ ಹಬ್ಬವನ್ನು ಆಚರಿಸಿದ್ದ ದಿಲೀಪ್ ಕುಮಾರ್ ಅವರು, ನಮ್ಮ ಸಂಸ್ಥೆಯ ಯಶಸ್ಸು ಈ ಸಿಬ್ಬಂದಿಗಳ ಶ್ರಮದ ಫಲ. ದೀಪಾವಳಿ ಹಬ್ಬದ ಸಮಯದಲ್ಲಿ ಅವರೊಂದಿಗೆ ಸಂಭ್ರಮ ಹಂಚಿಕೊಳ್ಳುವುದು ನನಗೆ ಹೆಮ್ಮೆ ಎಂದು ಅಭಿಪ್ರಾಯಪಟ್ಟರು.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss